ನ್ಯಾಟೊ ಶೃಂಗಸಭೆಗೆ ರಶ್ಯ ಆಕ್ರೋಶ: ‘ರಶ್ಯವನ್ನು ದುರ್ಬಲಗೊಳಿಸಲು ನ್ಯಾಟೊ ಯತ್ನ’

Update: 2023-07-11 18:01 GMT

Photo: PTI

ಕೀವ್: ಉಕ್ರೇನ್ ಯುದ್ಧದ ಬಗ್ಗೆ ಚರ್ಚಿಸಲು ಲಿಥುವಾನಿಯಾದ ವಿಲಿನಿಯಸ್ ನಗರದಲ್ಲಿ ನ್ಯಾಟೊ ನಾಯಕರು ಸಭೆ ಸೇರಿರುವಂತೆಯೇ, ರಶ್ಯವು ಅಮೆರಿಕ ನೇತೃತ್ವದ ಈ ಸೇನಾಮೈತ್ರಿಕೂಟದ ವಿರುದ್ಧ ಎಚ್ಚರಿಕೆಯ ಸರಣಿ ಸಂದೇಶಗಳನ್ನು ಹೊರಡಿಸಿದೆ.

ರಶ್ಯದ ವಿದೇಶಾಂಗ ಸಚಿವಾಲಯದ ವಕ್ತಾರ, ಮಾರಿಯಾ ಝಕಾರೋವಾ ಮಂಗಳವಾರ ಅಲ್ಜಝೀರಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ‘‘ ನ್ಯಾಟೊವನ್ನು ದುರ್ಬಲಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಯಾಕೆಂದರೆ ಅಮೆರಿಕ, ಬ್ರಿಟನ್ ಹಾಗೂ ಇಡೀ ನ್ಯಾಟೊ ರಾಷ್ಟ್ರಗಳ ರಶ್ಯವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ. ಕೆಲವು ವರ್ಷಗಳಿಂದ ಅವು ನೀಡುತ್ತಿರುವ ಹೇಳಿಕೆಗಳನ್ನು ಸುಮ್ಮನೆ ಗಮನಹರಿಸಿ. ನಮ್ಮ ದೇಶವನ್ನು ದುರ್ಬಲಗೊಳಿಸಲು ಅವು ಬಯಸುತ್ತಿವೆ’’ ಎಂದವರು ಹೇಳಿದ್ದಾರೆ.

ನ್ಯಾಟೊ ಒಕ್ಕೂಟದ ಸಂಭಾವ್ಯ ವಿಸ್ತರಣೆಯ ವಿರುದ್ಧ ರಶ್ಯವು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ತನ್ನ ದೇಶವು ಅದರ ನ್ಯಾಯಸಮ್ಮತ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಲಿದೆ ಎಂದವರು ಹೇಳಿದ್ದಾರೆ.

ನ್ಯಾಟೊ ಮೈತ್ರಿಕೂಟದಲ್ಲಿ ಉಕ್ರೇನ್ನ ಸೇರ್ಪಡೆಗೆ ಬಹುತೇಕ ನ್ಯಾಟೊ ಸದಸ್ಯ ರಾಷ್ಟ್ರಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಆದರೆ ಅಮೆರಿಕ ಹಾಗೂ ಜರ್ಮನಿಯಂತಹ ದೇಶಗಳು, ರಶ್ಯದ ಆಕ್ರಮಣ ಕೊನೆಗೊಂಡ ಆನಂತರವಷ್ಟೇ ಉಕ್ರೇನ್ನ ಸದಸ್ಯತ್ವದ ಅರ್ಜಿಯನ್ನು ಪರಿಶೀಲಿಸಬೇಕೆಂದು ಪ್ರತಿಪಾದಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News