ರಶ್ಯ: ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಗೆ ಮತ್ತೆ 19 ವರ್ಷ ಜೈಲುಶಿಕ್ಷೆ
Update: 2023-08-04 17:09 GMT
ಮಾಸ್ಕೊ, ಆ.4: ಜೈಲಿನಲ್ಲಿರುವ ರಶ್ಯ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿ ವಿರುದ್ಧ ದಾಖಲಿಸಿದ್ದ ಹಲವು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿರುವುದರಿಂದ ಹೆಚ್ಚುವರಿ 19 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕಟು ಟೀಕಾಕಾರನಾಗಿರುವ 47 ವರ್ಷ ನವಾಲ್ನಿಗೆ ವಂಚನೆ ಹಾಗೂ ಇತರ ಪ್ರಕರಣಗಳಲ್ಲಿ ಹನ್ನೊಂದೂವರೆ ವರ್ಷ ಜೈಲುಶಿಕ್ಷೆಯಾಗಿದೆ.
ಇದೀಗ ಹೆಚ್ಚುವರಿ 19 ವರ್ಷ ಶಿಕ್ಷೆಯಾಗಿರುವುದರಿಂದ 30 ವರ್ಷ ಜೈಲಿನಲ್ಲಿ ಕಳೆಯುವಂತಾಗಿದೆ. ಮಾಸ್ಕೋದ ಪೂರ್ವದಲ್ಲಿರುವ ಮೆಲೆಖೊವೊ ನಗರದಲ್ಲಿನ ನ್ಯಾಯಾಲಯದಲ್ಲಿ ಶುಕ್ರವಾರ ಪುಟಿನ್ ವಿರುದ್ಧ ಉಗ್ರಗಾಮಿ ಚಟುವಟಿಕೆಗೆ ಪ್ರಚೋದನೆ, ಹಣಕಾಸು ಒದಗಿಸುವುದು ಮತ್ತು ಉಗ್ರಗಾಮಿ ಸಂಘಟನೆ ರಚಿಸುವುದು ಸೇರಿದಂತೆ 6 ಪ್ರತ್ಯೇಕ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆದಿದೆ ಎಂದು ವರದಿಯಾಗಿದೆ.