ಉಕ್ರೇನ್‍ನ 75 ಡ್ರೋನ್‍ಗಳನ್ನು ಹೊಡೆದುರುಳಿಸಿದ ರಶ್ಯ: ವರದಿ

Update: 2024-07-22 16:34 GMT

  ಸಾಂದರ್ಭಿಕ ಚಿತ್ರ

ಮಾಸ್ಕೋ : ತೈಲ ಸಂಸ್ಕರಣಾಗಾರ ಸೇರಿದಂತೆ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ರವಿವಾರ ತಡರಾತ್ರಿ ಉಕ್ರೇನ್ ಉಡಾಯಿಸಿದ 75 ಡ್ರೋನ್‍ಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.

ಟುವಾಪ್ಸೆ ತೈಲ ಸಂಸ್ಕರಣಾಗಾರ ಇರುವ ಕ್ರಸ್ನೊಡಾರ್ ಪ್ರಾಂತದಲ್ಲಿ 8 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ರಶ್ಯದ ನೈಋತ್ಯದಲ್ಲಿರುವ ರೊಸ್ತೋವ್ ಪ್ರದೇಶದಲ್ಲಿ 47, ಕಪ್ಪು ಸಮುದ್ರ ಮತ್ತು ಅಝೋವ್ ಸಮುದ್ರ ವ್ಯಾಪ್ತಿಯಲ್ಲಿ 17, ಬೆಲ್ಗೊರೊಡ್, ವೊರೊನೆಝ್ ಮತ್ತು ಸ್ಮೊಲೆಂಸ್ಕ್ ಪ್ರಾಂತದಲ್ಲಿ ತಲಾ 1 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ. ಸೋಮವಾರ ಬೆಳಿಗ್ಗೆ ತೈಲ ಸಂಸ್ಕರಣಾಗಾರದ ಬಳಿ ಸರಣಿ ಸ್ಫೋಟಗಳು ಕೇಳಿಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News