ರಶ್ಯ | ಉಕ್ರೇನ್ ಡ್ರೋನ್ ದಾಳಿಯಲ್ಲಿ ವ್ಯಾಪಕ ಹಾನಿ

Update: 2024-10-27 16:26 GMT

PC : NDTV

ಮಾಸ್ಕೋ : ಶನಿವಾರ ತಡರಾತ್ರಿ ಉಕ್ರೇನ್‍ನಿಂದ ಡ್ರೋನ್‍ ಗಳ ಸುರಿಮಳೆಯಾಗಿದ್ದು ಇದರಲ್ಲಿ ಕನಿಷ್ಠ 51 ಡ್ರೋನ್‍ಗಳನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ರವಿವಾರ ಹೇಳಿದೆ.

ಬೆಲ್ಗೊರೊಡ್ ಪ್ರಾಂತದ ಮೇಲೆ ನಡೆದ ದಾಳಿಯಲ್ಲಿ ಓರ್ವ ಮಹಿಳೆ ಗಾಯಗೊಂಡಿದ್ದು ಹಲವು ಕಾರುಗಳಿಗೆ ಹಾನಿಯಾಗಿದೆ. ಮಿಚುರಿಂಸ್ಕಿ ಜಿಲ್ಲೆಯಲ್ಲಿ ಡ್ರೋನ್ ದಾಳಿ ನಡೆದ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಪ್ರಾಂತದ ಗವರ್ನರ್ ವ್ಯಚೆಸ್ಲಾವ್ ಗ್ಲಾಡ್ಕೋವ್ ಹೇಳಿದ್ದಾರೆ.

ತಾಂಬೋವ್ ಪ್ರಾಂತದಲ್ಲಿ 18 ಡ್ರೋನ್‍ ಗಳನ್ನು , ಬೆಲ್ಗೊರೊಡ್ ಗಡಿಭಾಗದ ಪ್ರದೇಶದಲ್ಲಿ 16 ಡ್ರೋನ್‍ ಗಳನ್ನು, ವೊರೊನೆಝ್, ಒರ್ಯೋಲ್ ಮತ್ತು ಕಸ್ರ್ಕ ಪ್ರದೇಶಗಳಲ್ಲಿ ಕನಿಷ್ಠ 17 ಡ್ರೋನ್‍ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News