ಖಾರ್ಕಿವ್ ಮೇಲೆ ರಶ್ಯ ದಾಳಿ; ಬಾಲಕನ ಸಹಿತ 49 ಮಂದಿ ಮೃತ್ಯು

Update: 2023-10-05 17:27 GMT

PHOTO: X\ @ZelenskyyUa

ಕೀವ್: ಈಶಾನ್ಯ ಉಕ್ರೇನ್ನ ಖಾರ್ಕಿವ್ ಪ್ರದೇಶದ ಹಳ್ಳಿಯೊಂದರ ಮೇಲೆ ರಶ್ಯ ಗುರುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 6 ವರ್ಷದ ಬಾಲಕನ ಸಹಿತ ಕನಿಷ್ಟ 49 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ನ ಅಧಿಕಾರಿಗಳು ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ ಖಾರ್ಕಿವ್ನ ಹ್ರೋಝ ಗ್ರಾಮದ ಅಂಗಡಿ ಹಾಗೂ ಹೋಟೆಲ್ ಅನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಹಲವು ಮಂದಿ ಗಾಯಗೊಂಡಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಖಾರ್ಕಿವ್ ವಲಯದ ಗವರ್ನರ್ ಒಲೆಹ್ ಸಿನೆಹುಬೋವ್ ಹೇಳಿದ್ದಾರೆ.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ `ರಶ್ಯದ ಭಯೋತ್ಪಾದನೆಯನ್ನು ಅಂತ್ಯಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ. ಝೆಲೆನ್ಸ್ಕಿ ಸ್ಪೇನ್ನಲ್ಲಿ ನಡೆಯುತ್ತಿರುವ ಯುರೋಪಿಯನ್ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News