ಬ್ಯಾಂಕಾಕ್‍ನಲ್ಲಿ ಶೂಟೌಟ್: ಒಬ್ಬ ಮೃತ್ಯು, 14 ವರ್ಷದ ಆರೋಪಿ ಬಂಧನ
Update: 2023-10-03 22:25 IST

ಬ್ಯಾಂಕಾಕ್ : ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‍ನ ಐಷಾರಾಮಿ ಶಾಪಿಂಗ್ ಮಾಲ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇತರ 3 ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 14 ವರ್ಷದ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಶೂಟೌಟ್‍ನಲ್ಲಿ ಮೂರು ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿ ತಿಳಿಸಿತ್ತು. ಬಳಿಕ ಸ್ಪಷ್ಟನೆ ನೀಡಿರುವ ತುರ್ತು ಸೇವಾ ಕೇಂದ್ರದ ನಿರ್ದೇಶಕ ಯುಥಾನಾ ಸ್ರೆಟ್ಟಾನನ್, ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಸಿಯಾಮ್ ಪ್ಯರಗಾನ್ ಮಾಲ್‍ನಲ್ಲಿ ಗುಂಡಿನ ಸದ್ದು ಕೇಳಿಬಂದ ಬಳಿಕ ಮಾಲ್‍ನಲ್ಲಿದ್ದ ನೂರಾರು ಮಂದಿ ದಿಕ್ಕೆಟ್ಟು ಓಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಕರಣದ ಬಗ್ಗೆ ಥೈಲ್ಯಾಂಡ್ ಪ್ರಧಾನಿ ಸ್ರೇಥ ತವಿಸಿನ್ ಆಘಾತ ವ್ಯಕ್ತಪಡಿಸಿದ್ದಾರೆ