ದಕ್ಷಿಣ ಕೊರಿಯಾ, ಅಮೆರಿಕ ಸಮರಾಭ್ಯಾಸ ಆರಂಭ

Update: 2024-08-19 15:03 GMT

photo : AI 

ಸಿಯೋಲ್ : ಪರಮಾಣು ಶಸ್ತ್ರಸಜ್ಜಿತ ಉತ್ತರ ಕೊರಿಯಾದ ವಿರುದ್ಧ ತಮ್ಮ ಸಂಯೋಜಿತ ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ಉದ್ದೇಶದಿಂದ ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಪಡೆಗಳು ಸೋಮವಾರ ದೊಡ್ಡ ಪ್ರಮಾಣದ ಸಮರಾಭ್ಯಾಸವನ್ನು ಆರಂಭಿಸಿವೆ.

ಜಂಟಿ ಸಮರಾಭ್ಯಾಸದ ಹೆಸರಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಆಕ್ರಮಣದ ಅಭ್ಯಾಸ ನಡೆಸುತ್ತಿವೆ ಎಂದು ಉತ್ತರ ಕೊರಿಯಾ ಆರೋಪಿಸಿದೆ. 11 ದಿನಗಳ ವಾರ್ಷಿಕ ಸಮರಾಭ್ಯಾಸವು ಆಗಸ್ಟ್ 29ರವರೆಗೆ ಮುಂದುವರಿಯಲಿದ್ದು ಕಂಪ್ಯೂಟರ್ ಬಳಸಿಕೊಂಡು ವಾರ್ಗೇಮ್ಸ್, ಗುಂಡು ಹಾರಾಟದ ತಾಲೀಮು ಸೇರಿದಂತೆ 40 ವಿಧದ ಕವಾಯತುಗಳನ್ನು ನಡೆಸಲಾಗುವುದು. ಕ್ಷಿಪಣಿಗಳು, ಜಿಪಿಎಸ್ ವ್ಯವಸ್ಥೆಗೆ ಅಡಚಣೆ, ಸೈಬರ್ ದಾಳಿಗಳು ಮುಂತಾದ ಉತ್ತರ ಕೊರಿಯಾದ ಬೆದರಿಕೆಗಳ ವಿರುದ್ಧದ ಸನ್ನದ್ಧತೆಯನ್ನು ಹೆಚ್ಚಿಸುವ ಮೇಲೆ ಕೇಂದ್ರೀಕೃತವಾಗಿವೆ. ಸಮರಾಭ್ಯಾಸದಲ್ಲಿ ದಕ್ಷಿಣ ಕೊರಿಯಾದ ಸುಮಾರು 19,000 ಸೇನಾ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಕವಾಯತಿನಲ್ಲಿ ಭಾಗವಹಿಸುವ ಅಮೆರಿಕದ ಸೈನಿಕರ ಸಂಖ್ಯೆಯನ್ನು ಮಿಲಿಟರಿ ದೃಢಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News