ಶ್ರೀಲಂಕಾ ಅಧ್ಯಕ್ಷರ ನೇತೃತ್ವದ ಮೈತ್ರಿಕೂಟಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ಜಯ

Update: 2024-11-15 09:44 GMT

ಅನುರ ಕುಮಾರ |PC : PTI 

ಕೊಲಂಬೊ: ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಲಂಕಾದ ಅನುರ ಕುಮಾರ ಡಿಸ್ಸಾನಾಯಕೆ ಅವರ ನೇತೃತ್ವದ ಮೈತ್ರಿಕೂಟವು ಭರ್ಜರಿ ಜಯಗಳಿಸಿದೆ.

ದಶಕಗಳಿಂದ ಕುಟುಂಬ ಪಕ್ಷಗಳ ಪ್ರಾಬಲ್ಯವಿರುವ ಶ್ರೀಲಂಕಾದಲ್ಲಿ ಡಿಸ್ಸಾನಾಯಕೆ ಅವರು ಸೆಪ್ಟೆಂಬರ್‌ನಲ್ಲಿ ನಡೆದ ದ್ವೀಪದ ಅಧ್ಯಕ್ಷೀಯ ಚುನಾವಣೆಯಲ್ಲಿ ಸುಲಭವಾಗಿ ಗೆದ್ದಿದ್ದರು.

ಆದರೆ ಅವರ ಮಾರ್ಕ್ಸ್‌ವಾದಿ ಪರ ಮೈತ್ರಿಕೂಟ ನ್ಯಾಷನಲ್ ಪೀಪಲ್ಸ್ ಪವರ್ (NPP), ಗುರುವಾರ ನಡೆದ ಚುನಾವಣೆಗೂ ಮೊದಲು ಸಂಸತ್ತಿನ 225 ಸ್ಥಾನಗಳಲ್ಲಿ ಕೇವಲ ಮೂರು ಸ್ಥಾನಗಳನ್ನು ಹೊಂದಿತ್ತು. ಹಾಗಾಗಿ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ಎದುರಿಸಲಾಗಿತ್ತು.

ಗುರುವಾರ ನಡೆದ ಚುನಾವಣೆಯಲ್ಲಿ NPP 107 ಸ್ಥಾನಗಳನ್ನು ಗೆದ್ದುಕೊಂಡಿದೆ. ಸುಮಾರು 62% ಮತಗಳನ್ನು ಪಡೆದು ಸಂಸತ್ತಿನಲ್ಲಿ ಬಹುಮತದ ಗಳಿಸಿದೆ ಎಂದು ಶ್ರೀಲಂಕಾದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಫಲಿತಾಂಶಗಳು ಖಚಿತಪಡಿಸಿದೆ. ಆ ಮೂಲಕ ಮೈತ್ರಿಕೂಟಕ್ಕೆ ಸರಳ ಬಹುಮತ ದೊರೆತಿದೆ.

ಅನುಪಾತ ಪ್ರಾತಿನಿಧ್ಯ ವ್ಯವಸ್ಥೆಯಡಿಯಲ್ಲಿ 22 ಕ್ಷೇತ್ರಗಳಿಂದ 196 ಸದಸ್ಯರನ್ನು ಮತದಾರರು ನೇರವಾಗಿ ಸಂಸತ್ತಿಗೆ ಆಯ್ಕೆ ಮಾಡುತ್ತಾರೆ. ಉಳಿದ 29 ಸ್ಥಾನಗಳನ್ನು ಪ್ರತಿ ಪಕ್ಷವು ಪಡೆದ ದ್ವೀಪದ ಅನುಪಾತದ ಮತದ ಪ್ರಕಾರ ಹಂಚಿಕೆ ಮಾಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News