ಸೊಮಾಲಿಯಾ ಬೀಚ್‍ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ | 32 ಮಂದಿ ಮೃತ್ಯು

Update: 2024-08-03 16:59 GMT

 ಸಾಂದರ್ಭಿಕ ಚಿತ್ರ

ಮೊಗದಿಶು : ಸೊಮಾಲಿಯಾ ರಾಜಧಾನಿ ಮೊಗದಿಶುವಿನ ಬೀಚ್‍ನಲ್ಲಿ ನಡೆದ ಆತ್ಮಹತ್ಯಾ ಬಾಂಬ್‍ದಾಳಿಯಲ್ಲಿ ಕನಿಷ್ಟ 32 ಮಂದಿ ಮೃತಪಟ್ಟಿದ್ದು ಇತರ 63 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಶನಿವಾರ ಹೇಳಿದ್ದಾರೆ.

ಸೊಮಾಲಿಯಾದಲ್ಲಿ ಅಂತರಾಷ್ಟ್ರೀಯ ಬೆಂಬಲ ಪಡೆದಿರುವ ಫೆಡರಲ್ ಸರಕಾರದ ವಿರುದ್ಧ ಬಂಡೆದ್ದಿರುವ ಅಲ್‍ಖೈದಾದ ಜತೆ ಸಂಪರ್ಕವಿರುವ ಅಲ್-ಶದಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿರುವುದಾಗಿ ಸರಕಾರ ಹೇಳಿದೆ. `ಜನಪ್ರಿಯ ಪ್ರವಾಸಿ ತಾಣವಾಗಿರುವ ಲಿಡೊ ಬೀಚ್‍ನಲ್ಲಿ ಶುಕ್ರವಾರ ರಾತ್ರಿ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡ ಬಳಿಕ ಆ ಪ್ರದೇಶಕ್ಕೆ ನುಗ್ಗಿದ ಓರ್ವ ಬಂದೂಕುಧಾರಿ ಮನಬಂದಂತೆ ದಾಳಿ ನಡೆಸಿದ್ದಾನೆ. ಸ್ಫೋಟ, ಗುಂಡಿನ ದಾಳಿಯಲ್ಲಿ ಬಾಂಬರ್ ಸೇರಿದಂತೆ ಕನಿಷ್ಟ 32 ಮಂದಿ ಸಾವನ್ನಪ್ಪಿದ್ದಾರೆ. 63 ಮಂದಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ವಕ್ತಾರ ಅದಾನ್ ಹಸನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News