ಸಿರಿಯಾ | ಹಮಾ ನಗರದಲ್ಲಿ ಮುನ್ನಡೆ ಸಾಧಿಸಿದ ಬಂಡುಕೋರರು
Update: 2024-12-05 16:49 GMT
ದಮಾಸ್ಕಸ್ : ಮೂರು ದಿನಗಳ ಭೀಕರ ಹೋರಾಟದ ಬಳಿಕ ಮಧ್ಯ ಸಿರಿಯಾದ ಆಯಕಟ್ಟಿನ ನಗರ ಹಮಾದ ಒಳಗೆ ಪ್ರವೇಶಿಸಲು ಬಂಡುಕೋರ ಪಡೆ ಸಫಲಗೊಂಡಿದ್ದು ಸರ್ಕಾರಿ ಪಡೆ ಹಿಂದಕ್ಕೆ ಸರಿದಿದೆ. ನಗರದ ಪ್ರಮುಖ ರಸ್ತೆಯನ್ನು ಬಂಡುಕೋರ ಪಡೆ ವಶಕ್ಕೆ ಪಡೆದಿದ್ದು ನಗರದ ಕೇಂದ್ರದತ್ತ ಮುಂದುವರಿದಿದೆ ಎಂದು ವರದಿಯಾಗಿದೆ.
ಹಮಾ ನಗರದಿಂದ ಸರ್ಕಾರಿ ಪಡೆ ಹಿಂದಕ್ಕೆ ಸರಿದಿದ್ದು ನಗರದ ಪೂರ್ವ ಹೊರವಲಯದಲ್ಲಿ ಸರಕಾರಿ ಪಡೆಗಳು ಹಾಗೂ ಬಂಡುಕೋರ ಪಡೆಯ ನಡುವೆ ತೀವ್ರ ಹೋರಾಟ ಮುಂದುವರಿದಿದೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಹಮಾ ನಗರದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡು ನಗರದ ಹೊರವಲಯದಲ್ಲಿ ನಿಯೋಜಿಸಲಾಗಿದೆ ಎಂದು ಸರಕಾರದ ಮೂಲಗಳು ದೃಢಪಡಿಸಿವೆ.