ಸಿರಿಯಾ | ರಶ್ಯದ ದಾಳಿಯಲ್ಲಿ ಬಂಡುಕೋರ ನಾಯಕ ಸಾವು?
Update: 2024-12-01 16:27 GMT
ದಮಾಸ್ಕಸ್ : ಸಿರಿಯಾದಲ್ಲಿ ಬಂಡುಕೋರ ಪಡೆಯ ಅಡಗುದಾಣದ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಬಂಡುಕೋರ ಪಡೆಯ ನಾಯಕ ಮೃತಪಟ್ಟಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹಯಾತ್ ತಹ್ರೀರ್ ಅಲ್-ಶಾಮ್ ಬಂಡುಕೋರ ಗುಂಪಿನ ಪ್ರಧಾನ ಕಚೇರಿಯಿದ್ದ ಕಟ್ಟಡವನ್ನು ಗುರಿಯಾಗಿಸಿ ನಡೆದ ವೈಮಾನಿಕ ದಾಳಿಯ ಸಂದರ್ಭ ಮುಖ್ಯ ಕಮಾಂಡರ್ ಅಬು ಮುಹಮ್ಮದ್ ಅಲ್-ಜುಲಾನಿ ಕಟ್ಟಡದ ಒಳಗಿದ್ದರು. ದಾಳಿಯಲ್ಲಿ ಕಟ್ಟಡ ಸಂಪೂರ್ಣ ಧ್ವಂಸಗೊಂಡಿದ್ದು ಜುಲಾನಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ವರದಿಯನ್ನು ರಶ್ಯ ಅಥವಾ ಸಿರಿಯಾ ಸರಕಾರ ದೃಢಪಡಿಸಿಲ್ಲ.