ಸಿರಿಯಾ | ಐಸಿಸ್ ನೆಲೆಗಳ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ
ದಮಾಸ್ಕಸ್ : ಐಸಿಸ್ ನೆಲೆಗಳನ್ನು ನಿರ್ಮೂಲನೆ ಮಾಡಲು ಮಧ್ಯ ಸಿರಿಯಾದಲ್ಲಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಸಿರಿಯಾದಲ್ಲಿನ ಬೆಳವಣಿಗೆಯ ಲಾಭವನ್ನು ಪಡೆಯಲು ಮತ್ತು ಮರು ಸಂಘಟಿತಗೊಳ್ಳಲು ಐಸಿಸ್‍ಗೆ ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಹೇಳಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ಬಿ- 52, ಎಫ್-15 ಹಾಗೂ ಎ-10 ಬಾಂಬರ್ ವಿಮಾನಗಳನ್ನು ಬಳಸಿ ಐಸಿಸ್‍ನ 75 ನೆಲೆಗಳ ಮೇಲೆ ದಾಳಿ ನಡೆಸಿವೆ. ಐಸಿಸ್ ಮಧ್ಯ ಸಿರಿಯಾದಲ್ಲಿ ಮರು ಸಂಘಟಿತಗೊಳ್ಳುವುದನ್ನು ಮತ್ತು ಬಾಹ್ಯ ಕಾರ್ಯಾಚರಣೆ ನಡೆಸುವುದನ್ನು ತಡೆಯಲು ನಡೆಯುತ್ತಿರುವ ಕಾರ್ಯಾಚರಣೆಯ ಅಂಗವಾಗಿ ಐಸಿಸ್ ನಾಯಕರು, ಕಾರ್ಯಕರ್ತರು ಮತ್ತು ಶಿಬಿರಗಳ ಮೇಲೆ ದಾಳಿ ನಡೆಸಲಾಗಿದೆ. ನಾಗರಿಕರ ಸಾವು-ನೋವಿನ ಬಗ್ಗೆ ಇದುವರೆಗೆ ಯಾವುದೇ ಮಾಹಿತಿಯಿಲ್ಲ. ಐಸಿಸ್‍ನ ಕಾರ್ಯನಿರ್ವಹಣಾ ಸಾಮಥ್ರ್ಯವನ್ನು ಕುಗ್ಗಿಸಲು ಮಿತ್ರರಾಷ್ಟ್ರಗಳು ಹಾಗೂ ಪಾಲುದಾರರ ಜತೆಗೆ ಕಾರ್ಯಾಚರಣೆ ಮುಂದುವರಿಯಲಿದೆ' ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸೋಮವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಸಿರಿಯಾ | ಟರ್ಕಿ ಡ್ರೋನ್ ದಾಳಿಯಲ್ಲಿ 11 ಮಂದಿ ಮೃತ್ಯು
ಉತ್ತರ ಸಿರಿಯಾದಲ್ಲಿ ಕುರ್ದಿಶ್ ಹಿಡಿತದಲ್ಲಿರುವ ಪ್ರದೇಶದ ಮೇಲೆ ಟರ್ಕಿ ನಡೆಸಿದ ಡ್ರೋನ್ ದಾಳಿಯಲ್ಲಿ 6 ಮಕ್ಕಳ ಸಹಿತ 11 ನಾಗರಿಕರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಉತ್ತರ ಸಿರಿಯಾದ ರಖಾ ನಗರದ ಬಳಿಯ ಮನೆಯೊಂದನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಒಂದೇ ಕುಟುಂಬದ 11 ಸದಸ್ಯರು ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳ ಏಜೆನ್ಸಿ ಹೇಳಿದೆ.
ಸಿರಿಯಾದ ಶಂಕಿತ ರಾಸಾಯನಿಕ ಶಸ್ತ್ರಾಸ್ತ್ರ ನೆಲೆಗಳ ಮೇಲೆ ಇಸ್ರೇಲ್ ದಾಳಿ
ಸಿರಿಯಾದಲ್ಲಿ ಶಂಕಿತ ರಾಸಾಯನಿಕ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿರುವುದನ್ನು ಇಸ್ರೇಲ್ ದೃಢಪಡಿಸಿದೆ.
ರಾಸಾಯನಿಕ ಶಸ್ತ್ರಾಸ್ತ್ರಗಳು ತೀವ್ರವಾದಿಗಳ ಕೈ ಸೇರುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್‍ನ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಹೇಳಿದ್ದಾರೆ. ಈ ಮಧ್ಯೆ, ಇಸ್ರೇಲ್ ಯೋಧರು ಆಕ್ರಮಿತ ಗೋಲನ್ ಹೈಟ್ಸ್ ಪ್ರದೇಶದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಇರುವ ಬಫರ್ ವಲಯಕ್ಕೆ ಹೋಗುತ್ತಿರುವ ಫೋಟೋಗಳನ್ನು ಇಸ್ರೇಲಿ ಮಿಲಿಟರಿ ಸೋಮವಾರ ಬಿಡುಗಡೆಗೊಳಿಸಿದೆ. ಬಂಡುಕೋರರು ದೇಶದ ಮೇಲೆ ಹಿಡಿತ ಸಾಧಿಸಿರುವ ಹಿನ್ನೆಲೆಯಲ್ಲಿ ಸಿರಿಯಾದಿಂದ ಹಿಂದೆ ಸರಿಯುವ 1974ರ ಒಪ್ಪಂದ ಮುರಿದು ಬಿದ್ದಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.