ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಮಿಡಿದ ಫುಟ್ಬಾಲ್ ಆಟಗಾರನ ಹೃದಯ!

Update: 2023-10-19 06:09 GMT

Photo: twitter.com/MoSalah

ಲಿವರ್ಪೂಲ್: ಗಲಭೆ ಪೀಡಿತ ಗಾಝಾ ಪ್ರದೇಶಕ್ಕೆ ಮಾನವೀಯ ನೆರವು ತಲುಪಲು ಅವಕಾಶ ನೀಡಬೇಕು ಮತ್ತು ಈ ಭಾಗದಲ್ಲಿ ಹತ್ಯಾಕಾಂಡ ನಿಲ್ಲಬೇಕು ಎಂದು ಲಿವರ್ಪೂಲ್ ಹಾಗೂ ಈಜಿಪ್ಟ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಮುಹಮ್ಮದ್ ಸಲಾಹ್ ಬುಧವಾರ ಹೃದಯಸ್ಪರ್ಶಿ ಮನವಿ ಮಾಡಿಕೊಂಡಿದ್ದಾರೆ.

ಅಕ್ಟೋಬರ್ 7ರಂದು ನಡೆದ ಇಸ್ರೇಲ್ ಮೇಲಿನ ದಾಳಿಯ ಬಳಿಕ ಗಾಝಾ ಪ್ರದೇಶದ ಗಡಿಗಳು ಮುಚ್ಚಿದ್ದು, ಗಾಝಾ ಜನತೆ ಅಗತ್ಯ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಂಗಳವಾರ ಗಾಝಾ ಆಸ್ಪತ್ರೆಯ ಮೇಲೆ ನಡೆದ ಭೀಕರ ರಾಕೆಟ್ ದಾಳಿಗೆ ಇಸ್ರೇಲ್ ನೇರ ಹೊಣೆ ಎಂಬ ಹಮಾಸ್ ನ ಆರೋಪವನ್ನು ಇಸ್ರೇಲ್ ನಿರಾಕರಿಸಿದೆ.

ಲಿವರ್ಪೂಲ್ ತಂಡಕ್ಕೆ ಚಾಂಪಿಯನ್ಸ್ ಲೀಗ್ ಮತ್ತು ಪ್ರಿಮಿಯರ್ ಲೀಗ್ ಪ್ರಶಸ್ತಿ ಗೆದ್ದುಕೊಟ್ಟ ಈಜಿಪ್ಟ್ ತಂಡದ ನಾಯಕ ಸಲಾಹ್ (31) ಅರಬ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಆಟಗಾರ.

"ಇಂತಹ ಸಂದರ್ಭದಲ್ಲಿ ಮಾತನಾಡುವುದು ಸುಲಭವಲ್ಲ. ಸಾಕಷ್ಟು ಹಿಂಸಾಚಾರ ಮತ್ತು ಹೃದಯವಿದ್ರಾವಕ ಹಾಗೂ ಕ್ರೂರ ಕೃತ್ಯಗಳು ನಡೆಯುತ್ತಿವೆ" ಎಂದು 6.27 ಕೋಟಿ ಅನುಯಾಯಿಗಳನ್ನು ಹೊಂದಿರುವ ಸಲಾಹ್ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬಣ್ಣಿಸಿದ್ದಾರೆ.

"ಇತ್ತೀಚಿನ ವಾರಗಳಲ್ಲಿ ಹಿಂಸಾಚಾರದಲ್ಲಿ ನಡೆದ ಈ ಹೆಚ್ಚಳವನ್ನು ನೋಡುವುದು ಕೂಡಾ ಅಸಾಧ್ಯ. ಎಲ್ಲ ಜೀವಗಳು ಪವಿತ್ರ ಹಾಗೂ ಅವುಗಳನ್ನು ರಕ್ಷಿಸಲೇಬೇಕು. ಕುಟುಂಬಗಳು ಸರ್ವನಾಶವಾಗುತ್ತಿವೆ. ಆದ್ದರಿಂದ ಈ ಹತ್ಯಾಕಾಂಡಗಳು ನಿಲ್ಲಬೇಕು. " ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News