ಇಮ್ರಾನ್ ಪತ್ನಿಯ ಆಹಾರದಲ್ಲಿ ಟಾಯ್ಲೆಟ್ ಕ್ಲೀನರ್ ಮಿಶ್ರಣ: ಆರೋಪ
Update: 2024-04-25 22:38 IST

ಇಮ್ರಾನ್‍ಖಾನ್ ಅವರ ಪತ್ನಿ ಬುಷ್ರಾ ಬೀಬಿ | PC : NDTV
ಇಸ್ಲಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪತ್ನಿ ಬುಷ್ರಾ ಬೀಬಿಗೆ ಆಹಾರದಲ್ಲಿ ಟಾಯ್ಲೆಟ್ ಕ್ಲೀನರ್ ಮಿಶ್ರಣ ಮಾಡಿ ನೀಡಲಾಗಿತ್ತು ಎಂದು ಅವರ ವಕ್ತಾರರು ಆರೋಪಿಸಿದ್ದಾರೆ.
ಗೃಹ ಬಂಧನದಲ್ಲಿರುವ ಬುಷ್ರಾ ಬೀಬಿಗೆ ಫೆಬ್ರವರಿ 24ರಂದು ನೀಡಿದ್ದ ಇಫ್ತಾರ್ ಊಟದಲ್ಲಿ ಮೂರು ಹನಿಯಷ್ಟು ಟಾಯ್ಲೆಟ್ ಕ್ಲೀನರ್ ಬೆರೆಸಿ ನೀಡಲಾಗಿತ್ತು. ಊಟ ಮಾಡಿದ ಬಳಿಕ ಅವರ ಆರೋಗ್ಯ ಹದಗೆಟ್ಟಿದ್ದು ಈಗ ನಿರಂತರ ಕ್ಷೀಣಿಸುತ್ತಿದೆ ಎಂದು ಬುಷ್ರಾ ಬೀಬಿಯ ವಕ್ತಾರೆ ಮಷಾಲ್ ಯೂಸಫ್‍ಝಾಯ್‍ರನ್ನು ಉಲ್ಲೇಖಿಸಿ `ಜಿಯೊ ನ್ಯೂಸ್' ವರದಿ ಮಾಡಿದೆ.