ಭಾರತದಲ್ಲಿ ತಯಾರಾದ ಕೆಮ್ಮಿನ ಸಿರಪ್ ನಲ್ಲಿ ವಿಷಕಾರಿ ಅಂಶ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2023-08-07 17:03 GMT

ಜಿನೆವಾ: ಇರಾಕ್ ನ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ಸಾಮಾನ್ಯ ಕೆಮ್ಮಿನ ಸಿರಪ್ ನಲ್ಲಿ ರಾಸಾಯನಿಕ ಪ್ರಮಾಣವು ನಿಗದಿತ ಮಿತಿಗಿಂತ ಅಧಿಕ ಮಟ್ಟದಲ್ಲಿರುವುದು ಪತ್ತೆಯಾಗಿದೆ. ಈ ಸಿರಪ್ ಅನ್ನು ಭಾರತದ ಫೋರ್ಟಿಸ್(ಇಂಡಿಯಾ) ಲ್ಯಾಬೊರೇಟರೀಸ್ ಸಂಸ್ಥೆಯು ಉತ್ಪಾದಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

`ಕೋಲ್ಡ್ ಔಟ್' ಎಂಬ ಬ್ರಾಂಡ್ ಹೆಸರನ್ನು ಹೊಂದಿರುವ ಕೆಮ್ಮಿನ ಸಿರಪ್ನಲ್ಲಿ ಡಿಥಿಲೀನ್ ಗ್ಲೈಸೋಲ್ ಮತ್ತು ಇಥಿಲೀನ್ ಗ್ಲೈಸೋಲ್ ರಾಸಾಯನಿಕದ ಮಟ್ಟವು ಸ್ವೀಕಾರಾರ್ಹ ಪ್ರಮಾಣಕ್ಕಿಂತ ಅಧಿಕವಾಗಿದೆ. ಈ ಸಿರಪ್ ಅನ್ನು ಡ್ಯಾಬ್ಲೈಫ್ ಫಾರ್ಮಾ ಸಂಸ್ಥೆಯ ಪರವಾಗಿ ಭಾರತದ ಫೋರ್ಟಿಸ್ (ಇಂಡಿಯಾ) ಲ್ಯಾಬೊರೇಟರೀಸ್ ಸಂಸ್ಥೆ ಉತ್ಪಾದಿಸಿದೆ ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News