ಆಸ್ಟ್ರೇಲಿಯದ ಬೀಚ್ನಲ್ಲಿ ದುರಂತ; ನಾಲ್ವರು ಭಾರತೀಯರು ಸಾವು

Update: 2024-01-25 17:01 GMT

ಸಾಂದರ್ಭಿಕ ಚಿತ್ರ

ಮೆಲ್ಬೋರ್ನ್: ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯದ ಬೀಚ್ ಒಂದರಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಭಾರತೀಯರು ಮುಳುಗಿ ಸಾವನ್ನಪ್ಪಿದ ಘಟನೆ ಘಟನೆ ಬುಧವಾರ ನಡೆದಿದೆ.

ವಿಕ್ಟೋರಿಯಾ ಫಿಲಿಪ್ ಐಲ್ಯಾಂಡ್ನಲ್ಲಿ ಈ ದುರಂತ ಸಂಭವಿಸಿದೆ. ಮಧ್ಯಾಹ್ನ 3:30 ಸಮುದ್ರದಲ್ಲಿ ಈಜಲು ಹೋದ ಈ ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ. ಈ ಬೀಚ್ನಲ್ಲಿ ಜೀವರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿರಲಿಲ್ಲವೆಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಆನಂತರ ಧಾವಿಸಿದ ಜೀವರಕ್ಷಕ ದಳದ ಸಿಬ್ಬಂದಿಗಳು ಈ ನಾಲ್ವರನ್ನು ಸಮುದ್ರದ ತೀರಕ್ಕೆ ತಂದಾಗ ಅವರೆಲ್ಲರೂ ಆಗಲೇ ಸಾವನ್ನಪ್ಪಿದ್ದರು ಎಂದು ವರದಿಗಳು ತಿಳಿಸಿವೆ.

ಮೃತರ ಪೈಕಿ ಓರ್ವ ಮಹಿಳೆ 40ರ ಹರೆಯದವರಾಗಿದ್ದು, ಅವರು ಆಸ್ಟ್ರೇಲಿಯದಲ್ಲಿ ರಜಾದಿನಗಳನ್ನು ಕಳೆಯಲು ಬಂದಿದ್ದರು. ಉಳಿದ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ 20ರ ಆಸುಪಾಸಿನ ವಯಸ್ಸಿನವರಾಗಿದ್ದು ಮೆಲ್ಬೋರ್ನ್ ಉಪನಗರ ಕ್ಲೈಡ್ ನಿವಾಸಿಗಳೆಂದು ವಿಕ್ಟೋರಿಯಾ ರಾಜ್ಯದ ಜೀವರಕ್ಷಕ ದಳ ಏಜೆನ್ಸಿಯ ಕಮಾಂಡರ್ ಕೇನ್ ಟ್ರೆಲೊಯರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News