ಟ್ಯುನೀಷಿಯಾ | ವಲಸಿಗರ ದೋಣಿ ಮುಳುಗಿ 9 ಮಂದಿ ಮೃತ್ಯು
Update: 2024-12-12 16:35 GMT
ಟ್ಯೂನಿಸ್ : ಟ್ಯುನೀಷಿಯಾದ ಕರಾವಳಿ ಬಳಿ ವಲಸಿಗರಿದ್ದ ದೋಣಿ ಮುಳುಗಿದ್ದು 9 ವಲಸಿಗರ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ಇತರ 6 ಮಂದಿಯ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಸಮುದ್ರದಲ್ಲಿ ಸುಂಟರ ಗಾಳಿಗೆ ಸಿಲುಕಿ ಚೆಬ್ಬಾ ಪ್ರದೇಶದ ಬಳಿ ಮುಳುಗಿದ್ದ ದೋಣಿಯಲ್ಲಿದ್ದ 27 ಮಂದಿಯನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ. ದೋಣಿಯಲ್ಲಿ ಕನಿಷ್ಠ 42 ಮಂದಿಯಿದ್ದರು ಎಂದು ವರದಿಯಾಗಿದೆ.