ಟರ್ಕಿ: ಚರ್ಚ್‍ನ ಮೇಲೆ ದಾಳಿ ಒಬ್ಬ ವ್ಯಕ್ತಿ ಸಾವು

Update: 2024-01-28 16:08 GMT

Photo:NDTV

ಅಂಕಾರ: ಟರ್ಕಿಯ ಇಸ್ತಾನ್‍ಬುಲ್ ನಗರದಲ್ಲಿ ಇಟಾಲಿಯನ್ ಚರ್ಚ್‍ನ ಒಳಗೆ ನುಗ್ಗಿದ ಇಬ್ಬರು ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇತರ ಕೆಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ರವಿವಾರ ಬೆಳಿಗ್ಗೆ ಇಸ್ತಾನ್‍ಬುಲ್‍ನ ಸರಿಯೆರ್ ಜಿಲ್ಲೆಯ ಸಂತಾ ಮರಿಯಾ ಚರ್ಚ್‍ನಲ್ಲಿ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ಚರ್ಚ್‍ಗೆ ಪ್ರವೇಶಿಸಿದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವಾಲಯ ಹೇಳಿದೆ.

ಹತ್ಯೆಯಾದ ವ್ಯಕ್ತಿಯನ್ನು ಗುರುತಿಸಿದ ಬಳಿಕ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದು ಯೋಜಿತ ಹತ್ಯೆಯಾಗಿರುವ ಸಾಧ್ಯತೆಯಿದೆ. ಗುಂಡಿನ ದಾಳಿಯಲ್ಲಿ ಕೆಲವರು ಗಾಯಗೊಂಡಿರುವ ಮಾಹಿತಿಯಿದೆ. ದಾಳಿಗೆ ಕಾರಣ ಸ್ಪಷ್ಟವಾಗಿಲ್ಲ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News