ಟರ್ಕಿ | ಕಳಪೆ ನಿರ್ಮಾಣ ; ಬಿಲ್ಡರ್ ಗೆ 865 ವರ್ಷ ಜೈಲುಶಿಕ್ಷೆ!

Update: 2024-09-28 15:29 GMT

ಸಾಂದರ್ಭಿಕ ಚಿತ್ರ 

ಅಂಕಾರ : ಕಳೆದ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪದ ಸಂದರ್ಭ ಕುಸಿದುಬಿದ್ದ 14 ಅಂತಸ್ತಿನ ಕಟ್ಟಡದ ಕಳಪೆ ನಿರ್ಮಾಣ ಕಾಮಗಾರಿ ನಡೆಸಿದ ಪ್ರಕರಣದಲ್ಲಿ ಬಿಲ್ಡರ್ ಗೆ ಟರ್ಕಿಯ ನ್ಯಾಯಾಲಯ 865 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಕಟ್ಟಡ ಕುಸಿತದಲ್ಲಿ 96 ಮಂದಿ ಮೃತಪಟ್ಟಿದ್ದರು. ಬಿಲ್ಡರ್ ಹಸನ್ ಅಲ್ಪಾರ್ಗನ್ `ಸಂಭವನೀಯ ಉದ್ದೇಶದಿಂದ ಹಲವು ವ್ಯಕ್ತಿಗಳ ಸಾವು-ನೋವಿಗೆ ಕಾರಣರಾಗಿದ್ದಾರೆ' ಎಂದು ನ್ಯಾಯಾಲಯ ಹೇಳಿದೆ.

ದಕ್ಷಿಣ ಟರ್ಕಿಯ ಅದಾನ ನಗರದಲ್ಲಿ 1975ರಲ್ಲಿ ನಿರ್ಮಿಸಲಾಗಿದ್ದ ಕಟ್ಟಡವು 2023ರ ಫೆಬ್ರವರಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ನೆಲಸಮಗೊಂಡಿತ್ತು. ಕಟ್ಟಡ ಕುಸಿದು ಬಿದ್ದ ಮಾಹಿತಿ ದೊರೆತ ತಕ್ಷಣ ಬಿಲ್ಡರ್ ಹಸನ್ ಸೈಪ್ರಸ್ ದೇಶಕ್ಕೆ ಪರಾರಿಯಾಗಿದ್ದರು. ಆದರೆ ಒಂದು ವಾರದ ಬಳಿಕ ಟರ್ಕಿಗೆ ಹಿಂತಿರುಗಿ ಪೊಲೀಸರಿಗೆ ಶರಣಾಗಿದ್ದರು. ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದ 260ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ನಿರ್ಮಾಣ ಕಾರ್ಯದ ಸಂದರ್ಭ ಕಳಪೆ ಗುಣಮಟ್ಟದ ಕಾಂಕ್ರೀಟ್, ಕಬ್ಬಿಣ ಬಳಸಿರುವುದು ದುರಂತಕ್ಕೆ ಕಾರಣ ಎಂದು ವಿಚಾರಣೆ ಸಂದರ್ಭ ತಾಂತ್ರಿಕ ತಜ್ಞರು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News