ಎಫ್-16 ಯುದ್ಧವಿಮಾನ : ಅಮೆರಿಕ- ಟರ್ಕಿ ಒಪ್ಪಂದ

Update: 2024-06-13 16:52 GMT

ಸಾಂದರ್ಭಿಕ ಚಿತ್ರ.| Photo: PTI

ಇಸ್ತಾಂಬುಲ್ : ಅಮೆರಿಕದ ಎಫ್-16 ಯುದ್ಧವಿಮಾನ ಖರೀದಿಸುವ 23 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಟರ್ಕಿಯ ರಕ್ಷಣಾ ಇಲಾಖೆಯ ಮೂಲಗಳು ಗುರುವಾರ ಹೇಳಿದೆ.

ಒಪ್ಪಂದದಡಿ ಟರ್ಕಿಗೆ 40 ಅತ್ಯಾಧುನಿಕ ಎಫ್-16 ಯುದ್ಧವಿಮಾನವನ್ನು ಅಮೆರಿಕ ಒದಗಿಸಲಿದೆ. ಜತೆಗೆ, ಈಗ ಟರ್ಕಿಯ ಬಳಿಯಿರುವ 79 ಯುದ್ಧ ವಿಮಾನಗಳನ್ನು ಆಧುನೀಕರಣಗೊಳಿಸಲಿದೆ. ಈ ಕುರಿತ ಒಪ್ಪಂದಕ್ಕೆ ಎರಡೂ ದೇಶಗಳ ನಿಯೋಗಗಳು ಸಹಿ ಹಾಕಿವೆ ಎಂದು ಟರ್ಕಿ ಹೇಳಿದೆ.

ನಿಕಟ ಮಿತ್ರರಿಗೆ ಮಾತ್ರ ಲಭ್ಯವಿರುವ ಅತ್ಯಾಧುನಿಕ ಎಫ್-16 ಯುದ್ಧ ವಿಮಾನಗಳು ಟರ್ಕಿಯ ಬತ್ತಳಿಕೆ ಸೇರಲಿದೆ. ಇದು ಟರ್ಕಿಯ ಜತೆಗಿನ ಭದ್ರತಾ ಭಾಗೀದಾರಿಕೆಯ ವಿಷಯದಲ್ಲಿ ಅಮೆರಿಕದ ಬದ್ಧತೆಯನ್ನು ಸೂಚಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News