ಟರ್ಕಿ ಸ್ಥಳೀಯ ಸಂಸ್ಥೆ ಚುನಾವಣೆ: ಅಧ್ಯಕ್ಷ ಎರ್ದೊಗಾನ್ ಪಕ್ಷಕ್ಕೆ ಮುಖಭಂಗ

Update: 2024-04-01 02:03 GMT

Photo: twitter.com/ChannelNewsAsia

ಹೊಸದಿಲ್ಲಿ: ಟರ್ಕಿಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧ್ಯಕ್ಷ ತಯ್ಯಿಪ್ ಎರ್ದೊಗಾನ್‌ ಅವರ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಿದ್ದು, ಅಧ್ಯಕ್ಷರಿಗೆ ಮುಖಭಂಗವಾಗಿದೆ. ಇದು ವಿರೋಧ ಪಕ್ಷಗಳ ಶಕ್ತಿಯನ್ನು ಪ್ರದರ್ಶಿಸಿದ್ದು, ಎರ್ದೊಗಾನ್‌ ಅವರ ಪ್ರಾಥಮಿಕ ಸ್ಪರ್ಧಿ ಇಸ್ತಾಂಬುಲ್ ಮೇಯರ್ ಎಕ್ರೆಮ್ ಇಮಾಮೊಗ್ಲು ಅವರ ಪರ ಬೆಂಬಲ ವ್ಯಕ್ತವಾಗಿದೆ.

ಇಸ್ತಾಂಬುಲ್ ಮೇಯರ್ ಚುನಾವಣೆಯಲ್ಲಿ ಇಮಾಮೊಗ್ಲು ಅವರು ಶೇಕಡ 10ರಷ್ಟು ಮತಗಳ ಮುನ್ನಡೆ ಸಾಧಿಸಿದ್ದಾರೆ. ರಿಪಬ್ಲಿಕನ್ ಪೀಪಲ್ಸ್ ಪಾರ್ಟಿ (ಸಿಪಿಎಚ್) ಅಂಕಾರಾ ಮೇಲೆ ನಿಯಂತ್ರಣ ಉಳಿಸಿಕೊಂಡಿದ್ದು, ದೇಶಾದ್ಯಂತ ಇತರ 15 ಮೇಯರ್ ಹುದ್ದೆಗಳನ್ನು ವಶಪಡಿಸಿಕೊಂಡಿದೆ.

ಈ ಚುನಾವಣಾ ಹಿನ್ನೆಡೆ ದೇಶದ ಎರಡು ದಶಕಗಳಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಟರ್ಕಿಯ ರಾಜಕೀಯ ಚಿತ್ರಣ ಬದಲಾಗುತ್ತಿದ್ದು, ಎರ್ಡೊಗಾನ್ ಹಾಗೂ ಅವರ ಎಕೆ ಪಾರ್ಟಿಯ ಎರಡು ದಶಕಗಳ ಆಡಳಿತದ ಅಂತ್ಯ ಸನ್ನಿಹಿತವಾಗಿದೆ ಎಂಬುದರ ಸೂಚಕವಾಗಿದೆ.

ಹೆಚ್ಚುತ್ತಿರುವ ಹಣದುಬ್ಬರ, ಇಸ್ಲಾಮ್ವಾದಿ ಮತದಾರರ ಅಸಮಾಧಾನ ಮತ್ತು ಸಿಎಚ್ಪಿಯ ಸಾಂಪ್ರದಾಯಿಕ ಬೆಂಬಲ ನೆಲೆಯನ್ನು ಮೀರಿ ವಿಸ್ತøತವಾಗಿರುವ ಅವರ ವರ್ಚಸ್ಸು ಇಮಾಮೊಅಗ್ಲು ಅವರ ಯಶಸ್ಸಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಚುನಾವಣಾ ಫಲಿತಾಂಶದ ಬಳಿಕ ಮಧ್ಯರಾತ್ರಿ ಮಾತನಾಡಿದ ಅಧ್ಯಕ್ಷ ಎರ್ಡೊಗಾನ್, ಈ ಫಲಿತಾಂಶ ದೇಶದ ರಾಜಕೀಯದಲ್ಲಿ ಮಹತ್ವದ ತಿರುವು ಎಂದು ಒಪ್ಪಿಕೊಂಡಿದ್ದಾರೆ. ದೇಶದ ಜನತೆಯ ಸಂದೇಶವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಜಯೋತ್ಸಾಹದಲ್ಲಿರುವ ಇಮಾಮೊಗ್ಲು ಹೇಳಿದ್ದಾರೆ. "ದೇಶದ ಸಂದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೆ ಅವರು ಕ್ರಮೇಣ ಸೋಲು ಅನುಭಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಇಸ್ತಾಂಬುಲ್ನ 1.6 ಕೋಟಿ ಮತದಾರರು ತಮ್ಮ ಎದುರಾಳಿಗಳಿಗೆ ಮತ್ತು ಅಧ್ಯಕ್ಷರಿಗೆ ನೀಡಿದ ಸ್ಪಷ್ಟ ಸಂದೇಶದ ಮಹತ್ವವನ್ನು ಅವರು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News