ಶಾಂತಿ ಮಾತುಕತೆಗೆ ಹಿನ್ನಡೆ | ರಶ್ಯಾದ ಕುರ್ಸ್ಕ್‌ನಲ್ಲಿ 28 ಹಳ್ಳಿಗಳನ್ನು ವಶಪಡಿಸಿಕೊಂಡ ಉಕ್ರೇನ್

Update: 2024-08-12 18:00 GMT

ಸಾಂದರ್ಭಿಕ ಚಿತ್ರ | PC : NDTV

ಮಾಸ್ಕೋ : ಉಕ್ರೇನಿನ ಸೇನೆ ರಶ್ಯಾದ ಗಡಿಯೊಳಗೆ ನುಸುಳಿ ಕುರ್ಸ್ಕ್ ಪ್ರದೇಶದ 28 ಹಳ್ಳಿಗಳನ್ನು ವಶಪಡಿಸಿಕೊಂಡಿದೆ. ಇದು ರಶ್ಯಾ ಮತ್ತು ಉಕ್ರೇನ್ ನಡುವೆ ನಡೆಯಬಹುದಾಗಿದ್ದ ಸಂಭಾವ್ಯ ಶಾಂತಿ ಮಾತುಕತೆಗೆ ಹಿನ್ನಡೆಯಾಗಲಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ರಶ್ಯ - ಉಕ್ರೇನ್ ಯುದ್ಧದ ಪ್ರಾರಂಭವಾದ ಬಳಕ ರಶ್ಯಾದ ಭೂಪ್ರದೇಶದ ಮೇಲೆ ಉಕ್ರೇನ್‌ನ ಅತಿದೊಡ್ಡ ದಾಳಿಯಿಂದ ಸಂಭವನೀಯ ಶಾಂತಿ ಮಾತುಕತೆಗಳಿಗೆ ಹಿನ್ನಡೆಯಾಗಲಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಸೇನೆಯು ರಶ್ಯಾದ ನಾಗರಿಕರು ಮತ್ತು ಪರಮಾಣು ಸೌಲಭ್ಯಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಿರುವ ಅವರು ಶತ್ರುವಿನೊಂದಿಗೆ ಯಾವ ಶಾಂತಿ ಮಾತುಕತೆ ನಡೆಸಬಹುದು ಎಂದು ಪ್ರಶ್ನಿಸಿದ್ದಾರೆ. ನಮ್ಮ ಪ್ರದೇಶಗಳಿಂದ ಶತ್ರುಗಳನ್ನು ಹೊಡೆದುರುಳಿಸುವುದು ನಮ್ಮ ಮುಖ್ಯ ಗುರಿ ಎಂದು ಪುಟಿನ್ ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News