ಉಕ್ರೇನ್ | ರಶ್ಯದ ಕ್ಷಿಪಣಿ ದಾಳಿಯಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ
Update: 2024-12-11 16:28 GMT
ಕೀವ್ : ಉಕ್ರೇನ್‍ನ ಝಪೋರಿಝಿಯಾ ನಗರದಲ್ಲಿ ಕಟ್ಟಡವೊಂದರ ಮೇಲೆ ಮಂಗಳವಾರ ರಶ್ಯ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಮೃತರ ಸಂಖ್ಯೆ 6ಕ್ಕೇರಿದ್ದು ಕಟ್ಟಡದ ಅವಶೇಷಗಳಡಿ ಇನ್ನೂ 4 ಮಂದಿ ಸಿಲುಕಿರುವ ಶಂಕೆಯಿದೆ ಎಂದು ಪ್ರಾದೇಶಿಕ ಗವರ್ನರ್ ಇವಾನ್ ಫೆಡೊರೊವ್ ಬುಧವಾರ ಹೇಳಿದ್ದಾರೆ.
ರಶ್ಯ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡದಲ್ಲಿ ವೈದ್ಯಕೀಯ ಕೇಂದ್ರವೊಂದು ಕಾರ್ಯಾಚರಿಸುತ್ತಿತ್ತು. ಮಂಗಳವಾರ ರಾತ್ರಿ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಗಾಯಗೊಂಡ 22 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಶೋಧ ಕಾರ್ಯ ಮುಂದುವರಿದಿದೆ ಎಂದು ಗವರ್ನರ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.