ಖಾರ್ಕಿವ್ ಪ್ರಾಂತದ ಪ್ರದೇಶ ಮರು ವಶಪಡಿಸಿಕೊಂಡ ಉಕ್ರೇನ್

Update: 2024-08-23 16:49 GMT

ಸಾಂದರ್ಭಿಕ ಚಿತ್ರ

ಕೀವ್: ಪೂರ್ವ ಉಕ್ರೇನ್‍ನ ಖಾರ್ಕಿವ್ ಪ್ರಾಂತದಲ್ಲಿ ರಶ್ಯದ ಪಡೆಗಳ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಪುನಃ ವಶಪಡಿಸಿಕೊಂಡಿದ್ದು ಇಲ್ಲಿ ರಶ್ಯ ಪಡೆಯ ಮುನ್ನಡೆಗೆ ಬಲವಾದ ಹೊಡೆತ ನೀಡಿರುವುದಾಗಿ ಉಕ್ರೇನ್ ಪಡೆಗಳು ಹೇಳಿವೆ.

ಖಾರ್ಕಿವ್ ಪ್ರಾಂತದಲ್ಲಿ ತನ್ನ ಪಡೆ ಸುಮಾರು 2 ಚದರ ಕಿ.ಮೀನಷ್ಟು ಮುನ್ನಡೆ ಸಾಧಿಸಿದೆ. ರಶ್ಯದ ಪಶ್ಚಿಮದಲ್ಲಿರುವ ಕಸ್ರ್ಕ್ ವಲಯದಲ್ಲಿ ಆಗಸ್ಟ್ 6ರಂದು ಸಾಧಿಸಿರುವ ಮುನ್ನಡೆಯನ್ನು ಕಾಯ್ದುಕೊಂಡಿದ್ದು ರಶ್ಯದ ಮಿಲಿಟರಿ ನೆಲೆ ಮತ್ತು ತೈಲ ಸಂಗ್ರಹಾಗಾರಗಳ ಮೇಲೆ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಎರಡು ದಿನದ ಹಿಂದೆ ವೊಲ್ಗೊಗ್ರಾಡ್ ಪ್ರಾಂತದಲ್ಲಿ ರಶ್ಯದ ಸೇನಾ ನೆಲೆಯನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಗ್ಲೈಡ್ ಬಾಂಬ್‍ಗಳನ್ನು ಇರಿಸಿದ್ದ ವಾಯು ನೆಲೆಗೆ ಗಮನಾರ್ಹ ಹಾನಿಯಾಗಿರುವುದನ್ನು ಉಪಗ್ರಹ ರವಾನಿಸಿದ ಚಿತ್ರಗಳು ದೃಢಪಡಿಸಿವೆ. ಗುರುವಾರ ರಶ್ಯಾದ ಕ್ರಸ್ನೋಡರ್ ಪ್ರಾಂತದ ಕವ್ಕಾಝ್ ಬಂದರಿನ ನಳಿ ಸರಕು ವಾಹನಗಳ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಗಾಯಗೊಂಡಿರುವುದಾಗಿ ರಶ್ಯದ ಸರಕಾರಿ ಸ್ವಾಮ್ಯದ ತಾಸ್ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News