ರಶ್ಯದ ದಾಳಿ ಸಂದರ್ಭ ಉಕ್ರೇನ್‍ನ ಎಫ್-16 ವಿಮಾನ ಪತನ

Update: 2024-08-30 17:04 GMT

PC : NDTV 

ಕೀವ್ : ರಶ್ಯದ ಆಕ್ರಮಣವನ್ನು ಎದುರಿಸಲು ಪಾಶ್ಚಿಮಾತ್ಯ ಪಾಲುದಾರರಿಂದ ಉಕ್ರೇನ್ ಪಡೆದಿದ್ದ ಎಫ್-16 ಯುದ್ಧವಿಮಾನವೊಂದು ಪತನಗೊಂಡಿದ್ದು ಪೈಲಟ್ ಮೃತಪಟ್ಟಿರುವುದಾಗಿ ಉಕ್ರೇನ್ ಸಶಸ್ತ್ರ ಸೇನಾ ಪಡೆಯ ಮುಖ್ಯಸ್ಥರು ಹೇಳಿದ್ದಾರೆ.

ಕಳೆದ ಸೋಮವಾರ ರಶ್ಯವು ಉಕ್ರೇನ್‍ನತ್ತ ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆದ ಸಂದರ್ಭ ಈ ದುರಂತ ಸಂಭವಿಸಿದೆ. ಈ ಕ್ಷಿಪಣಿಗಳಲ್ಲಿ ನಾಲ್ಕನ್ನು ಎಫ್-16 ಯುದ್ಧವಿಮಾನ ಹೊಡೆದುರುಳಿಸಿದೆ. ಆದರೆ ಮತ್ತೊಂದು ಕ್ಷಿಪಣಿ ಬಡಿದು ಯುದ್ಧವಿಮಾನ ಪತನಗೊಂಡಿದೆ ಎಂದು ಗುರುವಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದ್ದು ಅಪಘಾತದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News