ಚಂದ್ರನ ಅನ್ವೇಷಣೆಯ ಪ್ರಥಮ ಖಾಸಗಿ ಯೋಜನೆ ವಿಫಲ
Update: 2024-01-10 17:32 GMT
ವಾಷಿಂಗ್ಟನ್ : ಅನಿಯಂತ್ರಿತ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ಚಂದ್ರನ ಅನ್ವೇಷಣೆಯ ಜಗತ್ತಿನ ಮೊದಲ ಖಾಸಗಿ ಲ್ಯಾಂಡರ್ ಉದ್ದೇಶಿತ ಗುರಿ ತಲುಪಲು ವಿಫಲವಾಗಿದೆ ಎಂದು ವರದಿಯಾಗಿದೆ.
ಯುನೈಟೆಡ್ ಲಾಂಚ್ ಅಲಯನ್ಸ್‍ನ ವಲ್ಕಾನ್ ರಾಕೆಟ್ ಮೂಲಕ ಸೋಮವಾರ ಪ್ಲೋರಿಡಾದ ಕೇಪ್ ಕ್ಯಾನವರಲ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದ್ದ ಪೆರೆಗ್ರಿನ್ ಲ್ಯಾಂಡರ್ ಬಳಿಕ ಉಡಾವಣಾ ವಾಹನದಿಂದ ಯಶಸ್ವಿಯಾಗಿ ಪ್ರತ್ಯೇಕಗೊಂಡಿತ್ತು. ಆದರೆ ಕೆಲ ಗಂಟೆಗಳ ಬಳಿಕ ಕೆಲ ಸಮಸ್ಯೆಗಳು ಕಾಣಿಸಿಕೊಂಡಿವೆ. ಪೆರೆಗ್ರಿನ್‍ನ ಸೌರ ಫಲಕವನ್ನು ಸೂರ್ಯನ ಕಡೆಗೆ ತಿರುಗಿಸಲು ಮತ್ತು ಅದರ ಬ್ಯಾಟರಿಯನ್ನು ಮೇಲಕ್ಕೆ ಇರಿಸಲು ತೊಂದೆಯಾಗಿದೆ. ಇದು ಬಾಹ್ಯಾಕಾಶ ನೌಕೆಯ ಹೊರಮೈಯನ್ನು ಹಾನಿಗೊಳಿಸಿದೆ. ಆದ್ದರಿಂದ ನೌಕೆಯು ಚಂದ್ರನ ಮೇಲೆ ಸುಲಲಿತವಾಗಿ ಲ್ಯಾಂಡ್ ಆಗುವ ಯಾವುದೇ ಅವಕಾಶಗಳಿಲ್ಲ ಎಂದು ಅಮೆರಿಕ ಮೂಲದ ಅಯಸ್ಟ್ರೋಬಾಟಿಕ್ ತಂತ್ರಜ್ಞಾನ ಸಂಸ್ಥೆ ಹೇಳಿದೆ.