ಉಕ್ರೇನ್ ತಲುಪಿದ ಅಮೆರಿಕದ ಎಫ್16 ಯುದ್ಧ ವಿಮಾನಗಳು

Update: 2024-08-05 16:12 GMT

PC : NDTV 

ಕೀವ್ : ಬಹುನಿರೀಕ್ಷಿತ ಎಫ್-16 ಯುದ್ಧವಿಮಾನಗಳ ಪ್ರಥಮ ಕಂತನ್ನು ಅಮೆರಿಕವು ಉಕ್ರೇನ್‍ಗೆ ಒದಗಿಸಿದ್ದು ಉಕ್ರೇನ್‍ನ ಪೈಲಟ್‍ಗಳು ಪರೀಕ್ಷಾ ಹಾರಾಟ ನಡೆಸಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.

`ಎಫ್-16 ಉಕ್ರೇನ್‍ನಲ್ಲಿವೆ. ನಾವು ಅದನ್ನು ಸಾಧಿಸಿದ್ದೇವೆ. ಈ ಯುದ್ಧ ವಿಮಾನಗಳನ್ನು ಕರಗತ ಮಾಡಿಕೊಳ್ಳುತ್ತಿರುವ ನಮ್ಮ ಹುಡುಗರ ಬಗ್ಗೆ ನನಗೆ ಹೆಮ್ಮೆಯಿದೆ ಮತ್ತು ಈಗಾಗಲೇ ಅವುಗಳನ್ನು ನಮ್ಮ ದೇಶಕ್ಕಾಗಿ ಬಳಸಲು ಪ್ರಾರಂಭಿಸಿದ್ದೇವೆ' ಎಂದವರು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ಎಫ್-16 ಯುದ್ಧವಿಮಾನಗಳ ಆಗಮನವನ್ನು ಸ್ವಾಗತಿಸುವುದಾಗಿ ಮತ್ತು ಈ ಯುದ್ಧವಿಮಾನಗಳನ್ನು ಪಡೆಯಲು ನಿರಂತರ ಕಾರ್ಯ ನಿರ್ವಹಿಸಿದ ಅಧ್ಯಕ್ಷ ಹಾಗೂ ಇತರ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ಉಕ್ರೇನ್‍ನ ವರಿಷ್ಟ ಕಮಾಂಡರ್ ಒಲೆಕ್ಸಾಂಡರ್ ಸಿಸ್ರ್ಕಿ ಹೇಳಿದ್ದಾರೆ. ಈ ಯುದ್ಧವಿಮಾನಗಳಿಂದಾಗಿ ನಮ್ಮ ಹಲವು ಯೋಧರ ಪ್ರಾಣ ಉಳಿಯಲಿದೆ ಮತ್ತು ರಶ್ಯದ ಕ್ರಿಮಿನಲ್‍ಗಳು ಬಳಸುವ ಕ್ಷಿಪಣಿ, ಯುದ್ಧವಿಮಾನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಡೆದುರುಳಿಸಲು ಸಾಧ್ಯವಾಗಲಿದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಫ್-16 ಯುದ್ಧವಿಮಾನಗಳ ಆಗಮನ ಉಕ್ರೇನ್ ಯೋಧರ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ಈ ಮಧ್ಯೆ, ಎಫ್-ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮಥ್ರ್ಯ ತನ್ನ ಸೇನೆಗಿದೆ. ಇವುಗಳನ್ನು ಇರಿಸಿರುವ ಸೇನಾ ನೆಲೆಯ ಮೇಲೆ ದಾಳಿ ನಡೆಸುವುದಾಗಿ ರಶ್ಯ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News