ಅಮೆರಿಕ ಸರಕಾರ ‘ಶಟ್ಡೌನ್’ ?

Update: 2023-09-30 17:40 GMT

                                                                         Photo : NDTV 

ವಾಷಿಂಗ್ಟನ್ : ಶನಿವಾರ (ಸೆ.30) ಮಧ್ಯರಾತ್ರಿಯಿಂದ ಅಮೆರಿಕ ಸರಕಾರ ‘ಶಟ್ಡೌನ್’(ಕಾರ್ಯಸ್ಥಗಿತ) ಬಹುತೇಕ ನಿಶ್ಚಿತವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಅಮೆರಿಕದ ಅರ್ಥವ್ಯವಸ್ಥೆಗೆ ಅಕ್ಟೋಬರ್ 1ರಿಂದ ಹೊಸ ವರ್ಷ ಆರಂಭವಾಗುತ್ತದೆ. ಈ ಸಂದರ್ಭ ಫೆಡರಲ್ ಸರಕಾರಕ್ಕೆ ಧನಸಹಾಯವನ್ನು ಸಂಸತ್ ಅನುಮೋದಿಸದೆ ಹೋದರೆ ಸರಕಾರದ ಕಾರ್ಯ ಸ್ಥಗಿತವಾಗಲಿದೆ. ಹೌಸ್ ಆಫ್ ರೆಪ್ರಸೆಂಟೇಟಿವ್ ನಲ್ಲಿ ಬಹುಮತ ಹೊಂದಿರುವ ರಿಪಬ್ಲಿಕನ್ನರು ಬೈಡನ್ ನೇತೃತ್ವದ ಸರಕಾರ ವೆಚ್ಚಗಳನ್ನು ಕಡಿತಗೊಳಿಸಿದರೆ ಮಾತ್ರ 45 ದಿನಗಳ ಅಲ್ಪಾವಧಿಯ ಮಸೂದೆಯನ್ನು ಬೆಂಬಲಿಸುವುದಾಗಿ ಪಟ್ಟು ಹಿಡಿದಿರುವುದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಮಧ್ಯೆ ಸಂಸತ್ ನ ಸ್ಪೀಕರ್ ಕೆವಿನ್ ಮೆಕಾರ್ಥಿ ಸರಕಾರಕ್ಕೆ ಎದುರಾಗಲಿರುವ ಮುಖಭಂಗವನ್ನು ತಪ್ಪಿಸಲು ಅಂತಿಮ ಕ್ಷಣದ ಪ್ರಯತ್ನ ಮುಂದುವರಿಸಿದ್ದು ಶನಿವಾರ ಅಲ್ಪಾವಧಿಯ ನಿಧಿ ಮಂಜೂರುಗೊಳಿಸುವ ಮಸೂದೆಯನ್ನು ಮತಕ್ಕೆ ಹಾಕುವುದಾಗಿ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News