ಅಮೆರಿಕ | ಹೆದ್ದಾರಿಯಲ್ಲಿ ಇಳಿದು ವಿಮಾನ ಪತನ ; ನಾಲ್ವರಿಗೆ ಗಾಯ

Update: 2024-12-12 16:23 GMT

PC : X/@upuknews1

ನ್ಯೂಯಾರ್ಕ್ : ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಅವಳಿ ಇಂಜಿನ್‍ನ ವಿಮಾನವೊಂದು ಹೆದ್ದಾರಿಯಲ್ಲಿ ಇಳಿದು ಪತನಗೊಂಡ ಬಳಿಕ ಎರಡು ಹೋಳಾಗಿ ವಿಭಜನೆಗೊಂಡಿದ್ದು ಹಲವು ಕಾರುಗಳಿಗೆ ಹಾನಿಯಾಗಿದೆ. ಕನಿಷ್ಠ 4 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಟೆಕ್ಸಾಸ್‍ ನ ವಿಕ್ಟೋರಿಯಾ ನಗರದ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ವಿಮಾನ ಪತನಗೊಂಡಾಗ ಮೂರು ಕಾರುಗಳು ಜಖಂಗೊಂಡಿದ್ದು ವಿಮಾನ ಎರಡು ಹೋಳಾಗಿದೆ. ನಾಲ್ಕು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ವಿಮಾನದ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News