ಅಮೆರಿಕ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದ ವಿವೇಕ್‌ ರಾಮಸ್ವಾಮಿ

Update: 2024-01-16 07:33 GMT

ವಿವೇಕ್‌ ರಾಮಸ್ವಾಮಿ (Photo:X)

ಹೊಸದಿಲ್ಲಿ: ಭಾರತೀಯ-ಅಮೆರಿಕನ್‌ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು 2024 ಅಮೆರಿಕಾದ ಅಧ್ಯಕ್ಷೀಯ ಹುದ್ದೆಗಾಗಿನ ಸ್ಪರ್ಧೆಯಿಂದ ಇಂದು ಹಿಂದೆ ಸರಿದಿದ್ದಾರೆ ಹಾಗೂ ಡೊನಾಲ್ಡ್‌ ಟ್ರಂಪ್‌ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಲೋವಾ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ನಂತರ ಅವರ ಈ ನಿರ್ಧಾರ ಹೊರಬಿದ್ದಿದೆ.

ಫೆಬ್ರವರಿ 2023ರಲ್ಲಿ ಅಮೆರಿಕಾದ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧೆಗೆ ಮುಂದಾಗಿದ್ದ ವಿವೇಕ್‌ ರಾಮಸ್ವಾಮಿ ಮತ್ತು ವಲಸೆ ವಿಚಾರ ಕುರಿತ ತಮ್ಮ ಪ್ರಬಲ ಅಭಿಪ್ರಾಯಗಳು ಹಾಗೂ ಅಮೆರಿಕಾ ಫಸ್ಟ್‌ ಧೋರಣೆಯಿಂದ ರಿಪಬ್ಲಿಕನ್‌ ಮತದಾರರ ಗಮನ ಸೆಳೆಯುವಲ್ಲಿ ಸಫಲರಾಗಿದ್ದರು. ಅವರ ಪ್ರಚಾರಾಭಿಯಾನ ಮಾಜಿ ಅಧ್ಯಕ್ಷ ಟ್ರಂಪ್‌ ಅವರ ಪ್ರಚಾರಾಭಿಯಾನಕ್ಕಿಂತ ಭಿನ್ನವಾಗಿರಲಿಲ್ಲ.

ಓಹಿಯೋ ಮೂಲದ ರಾಮಸ್ವಾಮಿ ಅವರು ಕೇರಳದ ವಲಸಿಗ ದಂಪತಿಯ ಪುತ್ರನಾಗಿದ್ದಾರೆ. ಲೋವಾ ಚುನಾವಣೆ ಇನ್ನೇನು ಹತ್ತಿರ ಬರುತ್ತಿದೆ ಎನ್ನುವಾಗ ಟ್ರಂಪ್‌ ಅವರಿಂದ ವಿವೇಕ್‌ ರಾಮಸ್ವಾಮಿ ಸಾರ್ವಜನಿಕವಾಗಿ ಟೀಕಿಸಲ್ಪಟ್ಟರಲ್ಲದೆ ತಮ್ಮ ಸಾಮಾಜಿಕ ತಾಣ ಟ್ರುಥ್‌ ಸೋಶಿಯಲ್‌ನಲ್ಲಿ ವಿವೇಕ್‌ ರಾಮಸ್ವಾಮಿ ಅವರನ್ನು ವಂಚಕ ಎಂದೂ ಬಣ್ಣಿಸಿದ್ದರು.

ಲೋವಾದಲ್ಲಿ ರಾಮಸ್ವಾಮಿ ನಾಲ್ಕನೇ ಸ್ಥಾನ ಪಡೆದಿದ್ದರಲ್ಲದೆ ಶೇ 7.7 ರಷ್ಟು ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News