ಯೆಮನ್ | ಹೌದಿ ಶಸ್ತ್ರಾಗಾರಗಳ ಮೇಲೆ ಅಮೆರಿಕ, ಬ್ರಿಟನ್ ವಾಯುದಾಳಿ

Update: 2024-11-10 17:06 GMT

ಸಾಂದರ್ಭಿಕ ಚಿತ್ರ Photo : NDTV

ವಾಶಿಂಗ್ಟನ್ : ಇರಾನ್ ಬೆಂಬಲಿತ ಹೌದಿ ಹೋರಾಟಗಾರ ಯೆಮೆನ್ ನಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹಗಾರಗಳ ಮೇಲೆೆ ಅಮೆರಿ ಹಾಗೂ ಬ್ರಿಟನ್‌ನ ಯುದ್ಧವಿಮಾನಗಳು ಶನಿವಾರ ರಾತ್ರಿ ಸರಣಿು ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕದ ರಕ್ಷಣಾ ಕಾರ್ಯಾಲಯ ಪೆಂಟಗಾನ್ ವರದಿ ಮಾಡಿದೆ.

ಕೆಂಪು ಸಮುದ್ರ ಹಾಗೂ ಏಡನ್ ಕೊಲ್ಲಿಯ ನಡುವೆಯಿರುವ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿರುವ ಪ್ರಯಾಣಿಸುವ ಸೇನಾ ಹಾಗೂ ನಾಗರಿಕ ಹಡಗುಗಳನ್ನು ಬಳಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆಯೆಂದು ವರದಿ ತಿಳಿಸಿದೆ.

ಯೆಮನ್ ರಾಜಧಾನಿ ಸಾನಾದ ದಕ್ಷಿಣ ಅಲ್ ಸಬೀನ್ ಜಿಲ್ಲೆಯನ್ನು ಗುರಿಯಿರಿಸಿ ಅಮೆರಿಕ ವಾಯುಪಡೆಯು ಮೂರು ಬಾರಿ ಹಾಗೂ ಬ್ರಿಟಿಶ್ ವಾಯುಪಡೆ ಎರಡು ಬಾರಿ ದಾಳಿಗಳನ್ನು ನಡೆಸಿರುವುದಾಗಿ ಹುದಿ ಹೋರಾಟಗಾರರು ನಡೆಸುತ್ತಿರುವ ಅಲ್ ಮಸಿರಾ ಟಿವಿ ಜಾಲತಾಣ ವರದಿ ಮಾಡಿದೆ.

ಯಮನ್ ರಾಜಧಾನಿ ಸಾನಾದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಡೀ ಯುದ್ಧವಿಮಾನಗಳು ಹಾರಾಟ ಕಂಡುಬಂದಿದ್ದು, ಸ್ಫೋಟದ ಸದ್ದುಗಳು ಕೇಳುತ್ತಿದ್ದವೆಂದು ಅಲ್ ಮಸಿರಾ ತಿಳಿಸಿದೆ.

ಗಾಝಾ ಸಂಘರ್ಷದ ಬಳಿಕ ಕಳೆದ ಜನವರಿಯಿಂದೀಚೆಗೆ ಯೆಮನ್‌ನ ಹೌದಿ ಹೋರಾಟಗಾರರು ಕೆಂಪು ಸಮುದ್ರ ಹಾಗೂ ಏಡನ್ ಕೊಲ್ಲಿಯಲ್ಲಿ ಸಂಚರಿಸುವ ಹಡಗುಗಳ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತೀಕಾರವಾಗಿ ಅವರ ನೆಲೆಗಳ ಮೇಲೆ ಅಮೆರಿಕ ಹಾಗೂ ಬ್ರಿಟನ್ ಸರಣಿ ದಾಳಿಗಳನ್ನು ನಡೆಸುತ್ತಿವೆ.

ಈ ಘಷರ್ಣೆಗಳಿಂದಾಗಿ ಜಗತ್ತಿನ ಶೇ12ರಷ್ಟು ವಾಣಿಜ್ಯ ವ್ಯಾಪಾರವನ್ನು ನಡೆಸುತ್ತಿರುವ ಕೆಂಪು ಸಮುದ್ರದ ಜಲಮಾರ್ಗದ ಮೇಲೆ ಗಂಭೀರವಾದ ಪರಿಣಾಮನ್ನು ಬೀರಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News