ವಿಶ್ವಸಂಸ್ಥೆ ಮುಖ್ಯಸ್ಥರ ಉಕ್ರೇನ್ ಭೇಟಿ ತಿರಸ್ಕರಿಸಿದ ಝೆಲೆನ್‍ಸ್ಕಿ

Update: 2024-10-25 16:21 GMT

ವೊಲೊದಿಮಿರ್ ಝೆಲೆನ್‍ಸ್ಕಿ | PC : PTI 

ಕೀವ್ : ರಶ್ಯದಲ್ಲಿ ನಡೆದ `ಬ್ರಿಕ್ಸ್' ಶೃಂಗಸಭೆಯಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಪಾಲ್ಗೊಂಡಿದ್ದಕ್ಕೆ ಅಸಮಾಧಾನಗೊಂಡಿರುವ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ, ಗುಟೆರಸ್ ಉಕ್ರೇನ್‍ಗೆ ಭೇಟಿ ನೀಡುವುದನ್ನು ತಿರಸ್ಕರಿಸಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ವರದಿ ಮಾಡಿದೆ.

ರಶ್ಯದ ಕಝಾನ್‍ನ ಬಳಿಕ ಗುಟೆರಸ್ ಉಕ್ರೇನ್‍ಗೆ ಬರಲು ಇಚ್ಛಿಸಿದ್ದರು. ಆದರೆ ಅವರ ಭೇಟಿಯನ್ನು ಅಧ್ಯಕ್ಷರು ದೃಢಪಡಿಸಿಲ್ಲ. ಆದ್ದರಿಂದ ಗುಟೆರಸ್ ಇಲ್ಲಿಗೆ ಬರುವುದಿಲ್ಲ ಎಂದು ವರದಿ ಹೇಳಿದೆ.

ಕಝಾನ್‍ನಲ್ಲಿ ಬ್ರಿಕ್ಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ್ದ ಗುಟೆರಸ್ `ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ವಿಶ್ವಸಂಸ್ಥೆಯ ಸನದು(ಚಾರ್ಟರ್) ಮತ್ತು ಅಂತರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ' ಎಂದು ಪುನರುಚ್ಚರಿಸಿರುವುದಾಗಿ ವಿಶ್ವಸಂಸ್ಥೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News