ಆಳಂದ | ಆರೋಗ್ಯಾಧಿಕಾರಿಯಾಗಿ ಡಾ.ಮಹಾಂತಪ್ಪ ಹಾಳಮಳಿ ನಿಯೋಜನೆ
Update: 2024-11-20 15:03 GMT
ಆಳಂದ : ಪಟ್ಟಣದಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಹಿರಿಯ ಮುಖ್ಯ ವೈದ್ಯಾಧಿಕಾರಿ ಡಾ.ಮಹಾಂತಪ್ಪ ಹಾಳಮಳಿ ಅವರನ್ನು ತಾತ್ಕಾಲಿಕವಾಗಿ ತಾಲೂಕು ಆರೋಗ್ಯಾಧಿಕಾರಿಯನ್ನಾಗಿ ನಿಯೋಜನೆಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆದೇಶಿಸಿದ್ದಾರೆ.
ಆರೋಗ್ಯಾಧಿಕಾರಿ ಆಗಿದ್ದ ಡಾ.ಸುಶೀಲಕುಮಾರ ಅಂಬರೆ ಅವರು ಇತ್ತೀಚೆಗೆ ಅಮಾನತಾದ ಬಳಿಕ ಖಾಲಿ ಜಾಗಕ್ಕೆ ಪ್ರಭಾರಿಯನ್ನಾಗಿ ಡಾ.ಮಹಾಂತಪ್ಪ ಹಾಳಮಳಿ ಅವರನ್ನು ನಿಯೋಜಿಸಿದ್ದ ಹಿನ್ನೆಲೆಯಲ್ಲಿ ನ.17ರಂದು ಹಾಳಮಳಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.