ಕಲಬುರಗಿ | ಬಿಸಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಬಾಲಕಿ ಮೃತ್ಯು
ಕಲಬುರಗಿ : ಬಿಸಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಐದು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಇಲ್ಲಿನ ತಾಜ್ ನಗರದಲ್ಲಿ ವರದಿಯಾಗಿದೆ.
ತಾಜ್ ನಗರದ ಮುಹಮ್ಮದ್ ಗೌಸ್ ಮತ್ತು ತಾಹೇರ ಬಾನು ದಂಪತಿಯ ಪುತ್ರಿ ಅಫ್ರೀನಾ ಬಾನು (5) ಮೃತ ಬಾಲಕಿ ಎಂದು ಗುರುತಿಸಲಾಗಿದೆ.
ನ.12ರಂದು ಸಂಜೆ ಸ್ನಾನ ಮಾಡಲು ಮೃತ ಬಾಲಕಿಯ ತಾಯಿ ಬಕೆಟ್‌ನಲ್ಲಿ ವಾಟರ್ ಹೀಟರ್ ಹಾಕಿ ನೀರು ಬಿಸಿ ಮಾಡಿದ್ದರು. ನೀರು ಬಿಸಿಯಾದ ನಂತರ ವಾಟರ್ ಹೀಟರ್ ಆಫ್ ಮಾಡಿದ್ದರು. ಈ ಸಂದರ್ಭದಲ್ಲಿ ಮೂವರೂ ಮಕ್ಕಳು ಅದೇ ಸ್ಥಳದಲ್ಲೇ ಆಟವಾಡುತ್ತಿದ್ದರು. ಒಳಗೆ ಹೋಗಿ ಬಟ್ಟೆ ತರುವ ವೇಳೆಗೆ ಅಫ್ರೀನಾ ಬಾನು ಬಿಸಿ ನೀರಿನ ಬಕೆಟ್‌ಗೆ ಬಿದ್ದಿದ್ದಳು. ದೇಹದಲ್ಲಿ ಭಾಗಶಃ ಸುಟ್ಟ ಗಾಯಗಳಾಗಿದ್ದರಿಂದ ಕುಟುಂಬಸ್ಥರು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ.
ಬಳಿಕ ಬಾಲಕಿ ಗುಣಮುಖಳಾಗಿದ್ದಾಳೆ ಎಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದರು. ಬಳಿಕ ಏಕಾಏಕಿ ವಾಂತಿ-ಭೇದಿ ಮಾಡಿಕೊಂಡಿದ್ದಳು ಎನ್ನಲಾಗಿದೆ. ಆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.