ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ವಕ್ಫ್ ಬೋರ್ಡ್ ಸದಸ್ಯರಾಗಿ ಆಯ್ಕೆ

Update: 2024-11-21 11:39 GMT

ಕಲಬುರಗಿ: ಹಝ್ರತ್ ಖ್ವಾಝಾ ಬಂದೇ ನವಾಝ್ ದರ್ಗಾದ 24ನೇಯ ಸಜ್ಜಾದ ನಶೀನ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ವಕ್ಫ್ ಮಂಡಳಿಯ ನೂತನ ಸದಸ್ಯರಾಗಿ ಇಂದು(ಗುರುವಾರ) ಆಯ್ಕೆಯಾಗಿದ್ದಾರೆ.

ಮುಹಮ್ಮದ್‌ ಅಲಿ ಅಲ್ ಹುಸೈನಿ ಅವರು ತಂದೆ ಡಾ.ಸೈಯದ್ ಶಾ ಖುಸ್ರೋ ಹುಸೈನಿ ಮರಣದ ನಂತರ ನ.9ರಂದು ಅಧಿಕೃತವಾಗಿ ಕೆಬಿಎನ್ ದರ್ಗಾದ ಸಜ್ಜಾದ್ ನಶೀನರಾಗಿ ಪಟ್ಟಕ್ಕೇರಿದರು. ಅವರು ರಾಜ್ಯ ವಕ್ಫ್ ಮಂಡಳಿಯ ಚುನಾವಣೆಯಲ್ಲಿ ಮುತವಲ್ಲಿ ವರ್ಗದಲ್ಲಿ ಸ್ಪರ್ಧಿಸಿದ್ದರು.

ವಕ್ಫ್ ಬೋರ್ಡ್ ಚುನಾವಣೆಯು ನ.19 ರಂದು ರಾಜ್ಯದಲ್ಲಿ ಮತದಾನ ನಡೆದಿತ್ತು. 1,049 ಮತದಾರ ಪೈಕಿ 1,033 ಮತ ಚಲಾವಣೆಯಾಗಿದ್ದವು. ಅಲಿ ಅಲ್ ಹುಸೈನಿ ಅವರು 412 ಮತಗಳು ಪಡೆದು 2ನೇಯ ಸ್ಥಾನ ಪಡೆದಿದ್ದಾರೆ. ಮೊದಲ ಸ್ಥಾನದಲ್ಲಿ ಅನ್ವರ್ ಭಾಷಾ (421 ಮತ )ಇದ್ದಾರೆ. ಈ ಇಬ್ಬರೂ ನೂತನ ಸದಸ್ಯರಾಗಿ ಆಯ್ಕೆಯಾದರು.

ದಿವಂಗತ ಡಾ.ಸೈಯದ್ ಶಾ ಖುಸ್ರೋ ಹುಸೈನಿ ಅವರು 1988 ರಿಂದ 1992 ರವರೆಗೆ ಮತ್ತು ನಂತರ 2011 ರಿಂದ 2016 ರವರೆಗೆ ಕರ್ನಾಟಕ ವಕ್ಫ್ ಮಂಡಳಿಯ ಸದಸ್ಯರಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News