ಮಾಜಿ ಪ್ರಧಾನಿ ನಿಧನ: ನಾಳೆಯ ರಂಗದಂಗಳದಲಿ ಮಾತುಕತೆ ಕಾರ್ಯಕ್ರಮ ಮುಂದೂಡಿಕೆ
Update: 2024-12-27 05:48 GMT
ಕಲಬುರಗಿ: ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರ ನಿಧನ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಜಾರಿಯಲ್ಲಿರುವುದರಿಂದ ಕಲಬುರಗಿ ರಂಗಾಯಣದಿಂದ ಇದೇ ಡಿಸೆಂಬರ್ 28 ರಂದು ಕಲಬುರಗಿ ನಗರದ ಐವಾನ್-ಎ-ಶಾಹಿ ಪ್ರದೇಶದಲ್ಲಿನ
ಹೆಚ್.ಕೆ.ಇ. ಸಂಸ್ಥೆಯ ಬಾಲಕೀಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ "ರಂಗದಂಗಳದಲಿ ಮಾತುಕತೆ" ಕಾರ್ಯಕ್ರಮ ಮುಂದೂಡಲಾಗಿದೆ.
ಕಾರ್ಯಕ್ರಮದ ಮುಂದಿನ ದಿನಾಂಕ ತದನಂತರ ತಿಳಿಸಲಾಗುವುದೆಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.