ಕಲಬುರಗಿ | ಸಮಯ ಪ್ರಜ್ಞೆಯಿಂದ ಸಾಧನೆಯ ಗುರಿಸಾಧಿಸಿ : ಉಪ ಪೋಲಿಸ್ ಅಧೀಕ್ಷಕ ಜೇಮ್ಸ್

Update: 2024-12-26 14:07 GMT

ಕಲಬುರಗಿ : ಸಮಯ ಪ್ರಜ್ಞೆಯಿಂದ ಏನೆಯಲ್ಲ ತಮ್ಮ ಗುರಿ ಸಾಧಿಸಲು ಸಾಧ್ಯವಿದೆ, ಸಮಯ ಪಾಲನೆ ರೂಢಿಸಿಕೊಳ್ಳಬೇಕು ಎಂದು ಕಲಬುರಗಿಯ ಉಪ ಪೋಲಿಸ್ ಅಧೀಕ್ಷಕ ಜೇಮ್ಸ್ ಮಿನೇಜಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಮೌಂಟ್ ಕಾರ್ಮೆಲ್ ಸಿ.ಬಿ.ಎಸ್.ಸಿ. ಶಾಲೆಯ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ʼಸಾಧನೆಗೆ ಸಮಯಪ್ರಜ್ಞೆ ಹಾಗೂ ಶಿಸ್ತು ಅಗತ್ಯವಿದೆ. ಮಕ್ಕಳು ನಿರ್ದಿಷ್ಟ ಸಮಯಕ್ಕೆ ಶಾಲೆಗೆ ಬರುವುದು, ಮನೆಯಲ್ಲಿ ಓದು ಬರೆಹ ಮಾಡಲು ನಿಯಮಾನುಸಾರ ಚಟುವಟಿಕೆ ನಡೆಸುವುದು ಅತ್ಯಾವಶ್ಯಕ. ಕೇವಲ ಇಂಜಿನಿಯರಿoಗ್ ಮತ್ತು ಸಾಫ್ಟ್ವೇರ್ ಕ್ಷೇತ್ರಗಳ ಕಡೆಗೆ ಮಾತ್ರ ಗಮನ ನೀಡದೆ ಇತರ ವೃತ್ತಿಗಳಲ್ಲಿಯೂ ಯಶಸ್ಸು ಸಾಧಿಸಲು ಪ್ರಯತ್ನಿಸಬೇಕು,ʼ ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಕಡಗಂಚಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದುಮತಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪೋಷಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಸಹಕಾರದ ಮೂಲಕ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲು ಸಾಧ್ಯ. ಮೌಂಟ್ ಕಾರ್ಮೆಲ್ ಶಾಲೆ ಕಡಗಂಚಿ ಗ್ರಾಮ ಹಾಗೂ ಅಳಂದ್ ತಾಲ್ಲೂಕಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದ್ದು, ಸಿ.ಬಿ.ಎಸ್.ಸಿ ಸ್ಥಾನಮಾನವನ್ನು ಗಳಿಸಿದೆ ಎಂದರು.

ಕರ್ನಾಟಕ-ಗೋವ ಕಾರ್ಮೆಲ್ ಸಂಸ್ಥೆಯ ಕೌನ್ಸಿಲರ್ ಫಾದರ್ ಪ್ರಕಾಶ್ ಡಿ.ಕುನ್ಹ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಫಾ.ದೀಪಕ್ ತೋಮಸ್, ಪ್ರಾಚಾರ್ಯರಾದ ಫಾ.ಸಂದೀಪ್ ಗೋವಿಯಸ್, ಕಾರ್ಮೆಲ್ ಜ್ಞಾನ ಟ್ರಸ್ಟ್ನ ಟ್ರಸ್ಟಿ ಫಾ.ವಿಲಿಯಂ ಮಿರಾಂದ, ಫಾ.ಫೌಸ್ಟಿನ್, ಬ್ರ.ಮೆಲ್ರಿಕ್, ಅಳಂದ್ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಹ್ರಷಿಕೇಶ್ ದಾಂತಕಲ್ ಉಪಸ್ಥಿತರಿದ್ದರು.

ಬಳಿಕ ಎಲ್ಲಾ ತರಗತಿಯ ಮಕ್ಕಳು ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಪುಟಾಣಿ ಮಕ್ಕಳ ಪ್ರತಿಭೆ ಪೋಷಕರ ಮನಸೂರೆಗೊಳಿಸಿತು. ಸುಮಾರು 3500 ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News