ಕಲಬುರಗಿ | ಆಳಂದ ಮುಖ್ಯರಸ್ತೆ ಅಗಲೀಕರಣ : ನೋಟಿಸ್ ಜಾರಿಗೊಳಿಸಿದ ಪುರಸಭೆ

Update: 2024-12-25 16:14 GMT

ಕಲಬುರಗಿ : ಆಳಂದ ಪಟ್ಟಣದ ಹಳೆಯಕಾಲದ ಇತಿಹಾಸ ಹೊಂದಿರುವ ಮುಖ್ಯರಸ್ತೆಯ ಅಗಲೀಕರಣ ಪ್ರಕ್ರಿಯೆಗೆ ಸರಕಾರ 11 ಕೋಟಿ ರೂ. ಮೀಸಲಿಟ್ಟು ಒಂದುವರೆ ವರ್ಷ ಕಳದಿದೆ. ಈಗ ಪ್ರಕ್ರಿಯೆ ಅಂತಿಮ ಸ್ಥಿತಿಗೆ ತಲುಪಿಸಲು ಪುರಸಭೆ ಆಡಳಿತ ಭರದ ಸಿದ್ಧತೆ ಮಾಡಿಕೊಂಡು ಸಂಬoಧಿತರಿಗೆ ನೋಟಿಸ್ ಜಾರಿಗೊಳಿಸಿದೆ.

1970ರ ಮುಂಚಿತವಾಗಿ ತಮ್ಮ ಆಸ್ತಿಗಳ ಮೂಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು 15 ದಿನಗಳೊಳಗೆ ಪುರಸಭೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ತಮ್ಮ ಆಸ್ತಿಯನ್ನು ಅನಧಿಕೃತವೆಂದು ಪರಿಗಣಿಸಿ ಪುರಸಭೆ ಕಾಯ್ದೆ 1964ರ ಅಡಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂಬ ನೋಟಿಸನ್ನು ಡಿ.19ರಂದು ಮುಖ್ಯಾಧಿಕಾರಿಗಳು ಹೊರಡಿಸಿ ಎಚ್ಚರಿಸಿದ್ದಾರೆ.

ಈ ರಸ್ತೆಗೆ ಸಂಬoಧಿಸಿದoತೆ 480 ಕಟ್ಟಡಗಳು ಎಡಬಲ ರಸ್ತೆಗೆ ಅಂಟಿಕೊoಡಿದ್ದು, ಶೇ.40 ರಷ್ಟು ಕಟ್ಟಡಗಳು ರಸ್ತೆ ಅತಿಕ್ರಮಿಸಿಕೊಂಡಿವೆ ಎಂದು ಸಮಿತಿಯ ಅಂದಾಜಿಸಿಕೊಂಡಿದೆ.

ಇತಿಹಾಸ ಮತ್ತು ಪ್ರಸ್ತುತ ಪರಿಸ್ಥಿತಿ :

ಹತ್ತು-ಹದಿನೈದು ವರ್ಷಗಳ ಹಿಂದೆ ಈ ರಸ್ತೆಯ ಅಗಲೀಕರಣ ಕೈಗೊಳ್ಳುವುದು ಪ್ರಮುಖವಾಗಿತ್ತು, ಆದರೆ ಈಗ ಸರಕಾರದ ಕಚೇರಿಗಳು ಮಿನಿ ವಿಧಾನಸೌಧದೊಂದಿಗೆ ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಗೊಂಡು, ಈ ರಸ್ತೆ ತನ್ನ ಮಹತ್ವವನ್ನು ಸಡಿಲಗೊಳಿಸಿತು. ಹಗಲು ಸಮಯದಲ್ಲಿಯೂ ವಾಹನ ದಟ್ಟಣೆ ಕಡಿಮೆ ಕಂಡುಬರುತ್ತಿರುವುದು, ಸಾರ್ವಜನಿಕ ವಲಯದಲ್ಲಿ ಚರ್ಚೆ ಜೋರಾಗಿದೆ.

ಶ್ರೀರಾಮ ಮಾರುಕಟ್ಟೆಯಿಂದ ಮಹಾವೀರ್ ಚೌಕ ಮತ್ತು ತಹಶೀಲ್ದಾರ್ ಕಚೇರಿಯವರೆಗೆ ಮಾತ್ರ ಈ ರಸ್ತೆಯಲ್ಲಿ ಸ್ವಲ್ಪ ದಟ್ಟಣೆ ಕಂಡುಬರುತ್ತದೆ. ಇನ್ನಾರ್ಧ ಭಾಗದಲ್ಲಿ ಸನ್ಮತಿ ಕ್ರಾಸ್ನಿಂದ ದರ್ಗಾಚೌಕ್ ವರೆಗಿನ ರಸ್ತೆಯಲ್ಲಿ ಜನರ ಒಡಾಟ ಮತ್ತು ವಾಹನಗಳ ಚಲನೆ ತೀರಾ ಕಂಡಿಯಾಗಿದೆ. ಇಲ್ಲಿ ಸರ್ಕಾರದ ಹಣ ಖರ್ಚು ಮಾಡಿ ಸಾರ್ವಜನಿಕರ ಆಸ್ತಿಗಳಿಗೆ ನಷ್ಟದ ಮಧ್ಯ ಅಗಲೀಕರಣ ಬೇಕಾ ಬೇಡವೂ ಎಂಬ ಚರ್ಚೆ ಜೋರಾಗಿದೆ.

ಮಾರುಕಟ್ಟೆ, ಬಸ್ ನಿಲ್ದಾಣ ಸ್ಥಳಾಂತರದ ಪರಿಣಾಮ :

ಹಳೆಯ ಪಟ್ಟಣದ ಹೃದಯ ಭಾಗದಲ್ಲಿರುವ ಮಾರುಕಟ್ಟೆಯನ್ನು ಎಪಿಎಂಸಿ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾವನೆಗಳು ಇನ್ನೂ ಚರ್ಚೆಯಲ್ಲಿವೆ. ಇದೇ ರೀತಿಯಾಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಮುನ್ಸೂಚನೆ ನೀಡಲಾಗಿದೆ. ಈ ಕ್ರಮಗಳು ಹಳೆ ನಗರದಲ್ಲಿ ಈ ರಸ್ತೆಯ ಅಗಲೀಕರಣದ ಅವಶ್ಯಕತೆಯನ್ನು ಈಗ ಬೇಕೇ ಎಂಬವುದು ಮತ್ತೆ ಪ್ರಶ್ನಿಸುತ್ತದೆ.

ಪರಿಹಾರ ಕೊಟ್ಟರೆ ಅನುಕೂಲ:

ಬಹುತೇಕ ರಸ್ತೆ ಬದಿಯ ಆಸ್ತಿಗೆ ಸಂಬoಧಿತರಿಗೆ ಪರಿಹಾರ ಕೊಟ್ಟು ತೆರುವುಗೊಳಿಸಲು ತಕಾರರಿಲ್ಲ. ಆಸ್ತಿ ಕಟ್ಟಡ ಕಳೆದುಕೊಳ್ಳುತ್ತಿದ್ದೇವೆ. ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಸ್ತೆಯ ಬದಿಯ ಆಸ್ತಿಯ ಸಂಬಂಧಿತರು ಬೇಡಿಕೆಯಾಗಿದೆ. ಆದರೇ ಪರಿಹಾರ ನೀಡಲು ಸರ್ಕಾರ ಮತ್ತು ಪುರಸಭೆ ನಿಮಾವಳಿಯಲಿದೆ? ಅಷ್ಟೋಂದು ಪರಿಹಾರ ನೀಡುವಷ್ಟು ಸಸಕ್ತವಾಗಿದೆಯೇ ಎಂಬ ಪ್ರಶ್ನೆಯೂ ಕೇಳಿಬಂದಿದೆ.

50 ಅಡಿ ಬದಲು 40ಕ್ಕೆ ಸಮಾಧಾನ :

ಆಳಂದ ಮುಖ್ಯ ರಸ್ತೆಯೂ ಒಂದು ಕಾಲಕ್ಕೆ ವ್ಯಾಪಾರ ವೈಹಿವಾಟಿನ ಸಂಚಾರಕ್ಕೆ ಪ್ರಮುಖ ಮಾರ್ಗವಾಗಿ ಮಾರ್ಪಟ್ಟಿತ್ತಾದರು, ಕಳೆದೆರಡು ವರ್ಷಗಳಿಂದ ಇಲ್ಲಿನ ಸರಕಾರಿ ಕಚೇರಿಗಳು ಪಟ್ಟಣದ ಹೊರವಲಯದ ಐದಾರು ಕಿ.ಮೀ. ದೂರಕ್ಕೆ ನಿರ್ಮಿಸಲಾದ ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಬಳಿಕ ಅನೇಕ ಸರ್ಕಾರಿ ನೌಕರರ, ವ್ಯಾಪಾರಿಗಳು, ಶಿಕ್ಷಣ ನೌಕರಿಗಾಗಿ ನೂರಾರು ಮನೆಗಳು ಜಿಲ್ಲಾ ಕೇಂದ್ರ ಕಲಬುರಗಿಗೆ ಸ್ಥಳಾಂತಗೊoಡಿದ್ದು, ಇದರಿಂದ ಕಿರಾಣಿ, ಬಟ್ಟೆ, ಆಸ್ಪತ್ರೆ, ಇಸ್ತ್ರಿ, ಹಾಲು ಹಣ್ಣಿನ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದ್ದು ಹಾಗೂ ಪಟ್ಟಣದಲ್ಲಿ ಸಾಕಷ್ಟು ಬಾಡಿಗೆ ಮನೆಗಳು ಖಾಲಿಯಾಗಿದ್ದು ಹೀಗೆ ಹಲವು ವಿಧಗಳಲ್ಲಿ ಆಳಂದ ಪಟ್ಟಣಕ್ಕೆ ಆರ್ಥಿಕ ಹೊಡೆತಬಿದ್ದುಕೊಂಡಿದೆ.

ಸದ್ಯ 50 ಅಡಿ ರಸ್ತೆ ಅಗಲದ ಬದಲು 40 ಅಡಿಗೆ ಅಗಲೀಕರಣದ ನಿರ್ಧಾರ ಸರಿಯಾದ ಕ್ರಮವಾಗಿದೆ ಎಂದು ಕೊಂಚ ಸಮಾಧಾನವು ಜನ ತಂದುಕೊಳ್ಳತೊಡಗಿದ್ದಾರೆ.

ಈ ಎಲ್ಲ ಕಾರಣಗಳಿಂದಾಗಿ, ಈ ರಸ್ತೆಯ ಅಗಲೀಕರಣದಲ್ಲಿ ಹೂಡಿಕೆ ಮಾಡುವುದು ಲಾಭದಾಯಕವೇ ಅಥವಾ ಅನಾವಶ್ಯಕವೆ ಎಂಬುದು ಪುನಃ ಮೌಲ್ಯಮಾಪನಗೊಳ್ಳಬೇಕಾಗಿದೆ. ಅಗಲೀಕರಣಕ್ಕೆ ಸಂಬoಧಿಸಿದoತೆ ಸಾರ್ವಜನಿಕ ಅಭಿಪ್ರಾಯ, ಸ್ಥಳೀಯ ಶಾಸಕರ ಹಾಗೂ ಮಾಜಿ ಶಾಸಕರ ಮಾರ್ಗದರ್ಶನ ಮತ್ತು ಪುರಸಭೆ ಅಧಿಕಾರಿಗಳ ನಿರ್ಧಾರ ಅತ್ಯಂತ ಮುಖ್ಯ.

ಈ ಯೋಜನೆ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗುವುದೋ ಅಥವಾ ವ್ಯಾಪ್ತಿಯನ್ನು ಕಡಿಮೆಗೊಳಿಸುವುದೋ ಎಂಬ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬುದು ಈಗ ಕೇಳಿಬರಲಾರಂಬಿಸಿದೆ.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News