ಕಲಬುರಗಿ | ದಲಿತ ಸಮನ್ವಯ ಸಮಿತಿಯಿಂದ ಮನುಸ್ಮೃತಿ ಪ್ರತಿಗಳನ್ನು ದಹಿಸಿ ಪ್ರತಿಭಟನೆ
ಕಲಬುರಗಿ : ಜಾತಿಯತೆ ಮತ್ತು ಅಸಮಾನತೆ ಒಳಗೊಂಡ ಮನುಸ್ಮೃತಿಯ ದೇಶದ ಸಂವಿಧಾನ ವಿರೋಧಿಯಾಗಿದೆ ಎಂದು ಖಂಡಿಸಿ ದಲಿತ ಸಮನ್ವಯ ಸಮಿತಿಯ ಮುಖಂಡರು ಬುಧವಾರ ಸಂಜೆ ಮನುಸ್ಮೃತಿ ಪ್ರತಿಗಳನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ದಲಿತ ಸಮನ್ವಯ ಸಮಿತಿಯ ವತಿಯಿಂದ ಮನಸ್ಮೃತಿ ದಹಿಸಿ ಸಮಿತಿಯ ಅಧ್ಯಕ್ಷ ದಯಾನಂದ್ ಸೇರಿಕಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಬಸಲಿಂಗಪ್ಪ ಗಾಯಕ್ವಾಡ್, ಬಾಬುರಾವ್ ಅರುಣೋದಯ, ಸುನಿಲ್ ಹಿರೋಳಿಕರ, ಮಲ್ಲಿಕಾರ್ಜುನ್ ಬೋಳಣಿ ಮಾತನಾಡಿದರು.
1927ರಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸಮಾಜ ವಿರೋಧಿ ಮನುಸ್ಮೃತಿಯನ್ನು ಸುಟ್ಟು ಹಾಕಿದ ಪರಂಪರೆಯ ಭಾಗವಾಗಿ ನಾವು ಇದನ್ನು ಸುಟ್ಟುಹಾಕುತ್ತಿದ್ದೇವೆ. ದೇಶದಲ್ಲಿ ಇಂದಿಗೂ ಸಂವಿಧಾನ ಪಾಲಿಸದ ಮನುವಾದಿಗಳು ಮನುಸ್ಮೃತಿಯನ್ನು ಜಾರಿಗೆ ತರಲು ಹೊಟಿರುವುದು ಹಾಗೂ ವಿಶ್ವಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಡಾ.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳು ನೀಡುತ್ತಿರುವುದು ಮತ್ತು ಸಂವಿಧಾನ ಪ್ರತಿಗಳನ್ನು ಸುಟ್ಟುಹಾಕುತ್ತಿರುವುದು ಜಾತಿವಾದಿಗಳ ಯತಾಸ್ಥಿತಿವಾದಿಗಳ ಕೃತ್ಯವನ್ನು ಖಂಡನೀಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮುಖಂಡ ಆನಂದ್ ಗಾಯಕವಾಡ, ಉಪನ್ಯಾಸಕ ರಮೇಶ್ ಮಾಡಿಯಾಳ್ಕರ್, ಮುತ್ತಣ್ಣ ಜಂಗಲೇ ಶಿವಪ್ಪ ತೋಳೆ, ನಾಗರಾಜ ದೇವನೂರ, ಶಶಿಕಾಂತ ಸಿಂಗೆ ಮತ್ತಿತರು ಭಾಗವಹಿಸಿದ್ದರು.