ಕಲಬುರಗಿ | ಅಬ್ದುಲ್ ನಝೀರ್ ಸಾಬ್ ರವರ 90ನೇ ಜನ್ಮದಿನಾಚರಣೆ
ಕಲಬುರಗಿ : ನಗರದಲ್ಲಿರುವ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಪ್ರಾದೇಶಿಕ ಕೇಂದ್ರ ಕಲಬುರಗಿಯಲ್ಲಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಮತ್ತು ಪ್ರಾದೇಶಿಕ ಕೇಂದ್ರ ಕಲಬುರಗಿ ವತಿಯಿಂದ ಸಂಸ್ಥೆಯಲ್ಲಿ ಇಂದು ಮಾಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅಬ್ದುಲ್ ನಝೀರ್ ಸಾಬ್ ರವರ 90ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹನಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಸ್ಥೆಯ ಬೋಧಕಾರದ ಶಿವಪುತ್ರಪ್ಪ ಗೊಬ್ಬರು, ಡಾ.ರಾಜು ಕಂಬಳಿಮಠ, ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಎನ್.ಆರ್.ಎಲ್.ಎಂ. ಜಿಲ್ಲಾ ವ್ಯವಸ್ಥಾಪಕರಾದ ರೇವಪ್ಪ, ನಜೀರ್ ಸಾಬ್ ಅವರು ಗ್ರಾಮೀಣಾಭಿವೃದ್ಧಿಗೆ ಕೊಟ್ಟಂತಹ ಕೊಡುಗೆಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬೋಧಕರಾದ ಸಂತೋಷ ಎನ್.ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ, ಕುಟುಂಬಶ್ರೀ ಯೋಜನೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರೂಪಾ, ಸಂಯೋಜಕರಾದ ರಾಮಕೃಷ್ಣ ಗುಡಾಲ್, ಅರ್ಚನಾ ಪಾಟೀಲ್, ಅಶ್ವೀನಿ ಪೂಜಾರಿ ಹಾಗೂ ವಿವಿಧ ಗ್ರಾಮ ಪಂಚಾಯತ ಜಿ.ಪಿ.ಎಲ್.ಎಫ್. ಒಕ್ಕೂಟದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.