ಕಲಬುರಗಿ | ಡಿ.28ರಂದು 'ರಂಗದಂಗಳದಲಿ ಮಾತುಕತೆ' ಕಾರ್ಯಕ್ರಮ
Update: 2024-12-26 14:26 GMT
ಕಲಬುರಗಿ : ಕಲಬುರಗಿ ರಂಗಾಯಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಡಿ.28 ರಂದು ಕಲಬುರಗಿ ನಗರದ ಐವಾನ್-ಎ-ಶಾಹಿ ಪ್ರದೇಶದಲ್ಲಿನ ಹೆಚ್.ಕೆ.ಇ. ಸಂಸ್ಥೆಯ ಬಾಲಕೀಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ʼರಂಗದಂಗಳದಲಿ ಮಾತುಕತೆʼ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಯಚೂರಿನ ಹಿರಿಯ ರಂಗಕರ್ಮಿ ತಾಯಣ್ಣ ಯರಗೇರಾ ಅವರೊಂದಿಗೆ ರಂಗ ಪಯಣದ ಕುರಿತು ಬಿಚ್ಚು ಮನಸ್ಸಿನ ಮುಕ್ತ ಮಾತುಕತೆ ಕಾರ್ಯಕ್ರಮ ಇದಾಗಿದೆ.
ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುಲ್ಬರ್ಗಾ ವಿ.ವಿ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಲಿಂಗಪ್ಪ ಭಾಗವಹಿಸಲಿದ್ದು, ಹೆಚ್.ಕೆ.ಇ. ಬಾಲಕೀಯರ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಉಷಾದೇವಿ ಪಿ.ಪಾಟೀಲ ಅವರು ಉಪಸ್ಥಿತರಿರುವರು.