ಕಲಬುರಗಿ| ಭಾರತ ಕಮ್ಯೂನಿಸ್ಟ್ ಪಕ್ಷದ 100ನೇ ಸಂಸ್ಥಾಪನಾ ದಿನಾಚರಣೆ

Update: 2024-12-27 09:11 GMT

ಕಲಬುರಗಿ: ಭಾರತ ಕಮ್ಯೂನಿಸ್ಟ್ ಪಕ್ಷ (CPI) ದೇಶದಲ್ಲಿ ಸ್ಥಾಪನೆಯಾಗಿ 100ನೇ ವರ್ಷದಲ್ಲಿ ಪಾದಾರ್ಪಣೆ ಮಾಡಿರುವ ಹಿನ್ನಲೆಯಲ್ಲಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಪಕ್ಷದ ಕಛೇರಿಯ ಮುಂಭಾಗದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ಸಂಗಾತಿ ಪದ್ಮಾಕರ್‌ ಜಾನಿಬ್ ಅವರು, ಪಕ್ಷದ ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.

ಭಾರತ ಕಮ್ಯೂನಿಸ್ಟ್ ಪಕ್ಷ 100 ವಂಸತಗಳನ್ನು ಕಂಡಿದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಧೀರೊದಾತ್ತವಾಗಿ ಹೋರಾಡಿರುವುದಲ್ಲದೇ ದುಡಿಯುವ ವರ್ಗದ ಸಮಸ್ಯೆಗಳಿಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷವನ್ನು ಬಲಗೊಳಿಸಲು ಎಲ್ಲಾ ಸಂಗಾತಿಗಳು ನಿರಂತರವಾಗಿ ಚಳುವಳಿ ಮಾಡಬೇಕೆಂದು ಕರೆ ನೀಡಿದರು.

ಪಕ್ಷದ 100ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷದ ಮುಖಂಡರಾದ ಪದ್ಮಾಕರ್ ಜಾನಿಬ್, ಮಹ್ಮದ್ ಹುಸೇನ್ ಹಾಗೂ ಸಿದ್ದಪ್ಪ ಪಾಲ್ಕಿ ರವರಿಗೆ ಗೌರವಿಸಲಾಯಿತು.

ಪಕ್ಷದ ಹಿರಿಯ ಮುಖಂಡ, AIKS ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ, CPI ಪಕ್ಷದ ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಪದ್ಮಾವತಿ ಮಾಲಿಪಾಟೀಲ್, AITUC ರಾಜ್ಯ ಸಮಿತಿ ಸದಸ್ಯರಾದ ಸಿದ್ದಪ್ಪ ಪಾಲ್ಕಿ ಮಾತನಾಡಿದರು.

ಈ ಸಂದರ್ಭದಲ್ಲಿ AIKS ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಚೌದ್ರಿ, NFIW ಜಿಲ್ಲಾ ಕಾರ್ಯದರ್ಶಿ ವಿದ್ಯಾಶ್ರೀ ರೆಡ್ಡಿ, AITUC ಮಹಿಳಾ ನಾಯಕಿ ಭಾಗಮ್ಮ ಪೂಜಾರಿ, ಮಹಾದೇವಿ ಪೂಜಾರಿ ಮುಂತಾದವರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News