ಮಿತ್ರ ಪಕ್ಷದ ಬಗ್ಗೆ ಬಿಜೆಪಿಯ ಸ್ಮಶಾನ ಮೌನ: ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

Update: 2024-06-23 09:01 GMT

ಕಲಬುರಗಿ, ಜೂ.23: ಮಿಕ್ಕಿದ ಟೈಮಲ್ಲಿ ಬೇಟಿ ಪಡಾವೋ ಬೇಟಿ ಬಚಾವೋ, ನ್ಯಾಯದ ಬಗ್ಗೆ ಜಪ ಮಾಡುವ ಬಿಜೆಪಿಯವರು ಅಧಿಕಾರ ಸ್ವೀಕಾರದ ಸಂದರ್ಭದಲ್ಲಿ ಸಂವಿಧಾನಕ್ಕೆ ತಲೆಬಾಗುವ ಪ್ರಧಾನಿಗಳು ಸಂವಿಧಾನ, ಕಾನೂನು ಉಲ್ಲಂಘನೆಯಾದಾಗ ಮಾತನಾಡುವುದಿಲ್ಲ. ಸ್ವಪಕ್ಷದವರು ಪೋಕ್ಸೋ ಪ್ರಕರಣಗಳನ್ನು ಎದುರಿಸುತ್ತಿರುವಾಗ ಮತನಾಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ರವಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನದ ಮಾಜಿ ಸಂಸದ ಪ್ರಜ್ಚಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವಂತಹದ್ದು ಅಸಹ್ಯ ಪಡೆಯುವಂತ ಪ್ರಕರಣಗಳು. ಮಾಡಿದವರೆಗೆ ಇದರ ಬಗ್ಗೆ ಏನು ಅನ್ನಿಸದಿರುವುದೇ ಆಶ್ಚರ್ಯಪಡುವ ವಿಷಯ. ಎಲ್ಲರೂ ಬೇರೆಯವರ ರಾಜೀನಾಮೆ ಕೇಳ್ತಿದ್ದಾರೆ ಹೊರತು, ತಾವು ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ಅವರಿಗೆ ಕೇಳಬೇಕಾದ ಪ್ರಶ್ನೆಗಳು ಮಾಧ್ಯಮಗಳು ನಮಗೆ ಕೇಳ್ತಿವೆ ಎಂದರು.

ಎಚ್.ಡಿ ದೇವೆಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಆತ್ಮವಲೋಕನ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು. ಅವರ ಪಕ್ಷದ ಲಕ್ಷಾಂತ ಕಾರ್ಯಕರ್ತರು ಅವರುನ್ನು ನಂಬಿಕೊಂಡಿದ್ದಾರೆ. ಎನ್.ಡಿ.ಎ ಅವರನ್ನು ನಂಬಿಕೊಂಡಿದೆ. ನಾನು ಹೆಚ್ಚಿಗೆ ಏನು ಮಾತನಾಡಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News