ಬದಲಾವಣೆ ಎಂಬುವುದು ನಮ್ಮಿಂದಲೇ ಆರಂಭವಾಗಬೇಕು: ಪ್ರಭು ದೊರೆ

Update: 2025-03-21 14:28 IST
ಬದಲಾವಣೆ ಎಂಬುವುದು ನಮ್ಮಿಂದಲೇ ಆರಂಭವಾಗಬೇಕು: ಪ್ರಭು ದೊರೆ
  • whatsapp icon

ಕಲಬುರಗಿ: ಬದಲಾವಣೆಯು ತನ್ನಿಂತಾನೇ ಆಗಲು ಸಾಧ್ಯವಿಲ್ಲ ಅದು ನಮ್ಮಿಂದಲೇ ಆರಂಭವಾಗಬೇಕು ಎಂದು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀ ಪ್ರಭು ದೊರೆ ಅಭಿಪ್ರಾಯ ಪಟ್ಟರು.

ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಜ್ಞಾನ ಗಂಗಾ ಆವರಣದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸ್ನಾತಕೋತ್ತರ ಬಾಲಕರ {ಕಾವೇರಿ}ವಸತಿ ನಿಲಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು, ಸಾಧನೆಗೈದ ವಿವಿಧ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.

ಬುದ್ಧ ಬಸವ ಅಂಬೇಡ್ಕರ್ ವಿಚಾರಧಾರೆಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಸ್ತುತ ಜಗತ್ತು ಜ್ಞಾನಯುಗವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಬೇಕು. ಮಹಾನ ನಾಯಕರ ತತ್ವಗಳು ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮಲ್ಲಿ ಅತಿಥಿಗಳಾಗಿ ಮಾತನಾಡಿದ ಕಲಬುರಗಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕರಬಸಮ್ಮ ಪೂಜಾರಿ, ವಸತಿ ನಿಲಯಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಬಡವರು ಮತ್ತು ಮಧ್ಯಮ ವರ್ಗದಿಂದ ಬಂದವರು ವಿದ್ಯಾರ್ಥಿ ನಿಲಯ ಸೌಲಭ್ಯಗಳು ಬಳಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದ ಕಲಬುರಗಿ ಜಿಲ್ಲಾ NSUI ಅಧ್ಯಕ್ಷರಾದ ಡಾ. ಗೌತಮ್ ಕರಿಕಲ್, ಪದವಿ ಮುಗಿಸಿ ಬಂದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ವಾತಾವರಣಕ್ಕೆ ಹೊಂದಿಕೊಂಡು ವಿದ್ಯಾಭ್ಯಾಸ ಮಾಡಿಬೇಕು. ನಿಮ್ಮ ಸಮಸ್ಯೆಯೇ ನಿಮಗೆ ಎಚ್ಚರಿಕೆ ಘಂಟೆ ಮತ್ತು ನಿಮ್ಮ ಜ್ಞಾನವೇ ನಿಮಗೆ ಶ್ರೀರಕ್ಷೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಸತಿ ನಿಲಯದ ನಿಲಯ ಪಾಲಕರಾದ ನಾಗಪ್ಪ ನಾಗನೂರ್, ನಿಲಯ ಅಧ್ಯಕ್ಷರಾದ ಸಂತೋಷ್ ಎಸ್.ಪಿ. ಉಪಾಧ್ಯಕ್ಷರಾದ ಶೈಲೇಶ್ ಸೋನಾಳೆ, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದ ಆನಂದ್ ಮೈತ್ರಿ, ಉಪಾಧ್ಯಕ್ಷರಾದ ಕೇಮಣ್ಣ, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದ ಚಂದ್ರು ಸಂಗೋಳ್ಳಗಿ ಉಪಾಧ್ಯಕ್ಷರಾದ ಶಿವಲಿಂಗಪ್ಪ ಶಿಂಧೆ, ವಸತಿ ನಿಲಯದ ಅಡುಗೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು

ಭೀಮಾಶಂಕರ ಝಳಕ್ಕಿ ನಿರೂಪಿಸಿದರು. ಕರ್ಣ ವಂದಿಸಿದರು.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News