ಕೌನ್ಸಿಲರ್ ಉಪ ಚುನಾವಣೆ ವೇಳಾಪಟ್ಟಿ ಪ್ರಕಟ | ನ.23ಕ್ಕೆ ಮತದಾನ, ನ.26ಕ್ಕೆ ಮತ ಎಣಿಕೆ

Update: 2024-11-06 11:27 GMT

ಕಲಬುರಗಿ : ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ 3-ನೀಚೆ ಮೊಹಲ್ಲಾ ಸೀಬರ್ ಕಟ್ಟಾ ಅಂಬೇಡ್ಕರ್ ಚೌಕ್ ಮತ್ತು ಅಫಜಲ್ಪುರ ತಾಲೂಕಿನ ಅಫಜಲ್ಪುರ ಪುರಸಭೆಯ ವಾರ್ಡ್ ಸಂಖ್ಯೆ 1ರ ರಾಜೀವ ನಗರದ ಸದಸ್ಯ ಸ್ಥಾನ ವಿವಿಧ ಕಾರಣದಿಂದ ತೆರವಾಗಿರುವ ಹಿನ್ನೆಲೆಯಲ್ಲಿ ಅದರ ಭರ್ತಿಗೆ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಗಳು 1979ರ 8ನೇ ನಿಯಮದಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಚುನಾವಣೆಯ ವೇಳಾಪಟ್ಟಿ ಹೊರಡಿಸಿದ್ದಾರೆ.

ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ 3 ಮತ್ತು ಅಫಜಲ್ಪುರ ಪುರಸಭೆಯ ವಾರ್ಡ್ ಸಂಖ್ಯೆ 1ರ ಸದಸ್ಯ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ ಎಂದು ಹೇಳಿದರು.

ಚುನಾವಣಾ ವೇಳಾಪಟ್ಟಿಯಂತೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 11 (ಸೋಮವಾರ) ಆಗಿದೆ. ನವೆಂಬರ್ 12 (ಮಂಗಳವಾರ) ನಾಮಪತ್ರಗಳನ್ನು ಪರಿಶೀಲಿಸಲಾಗುತ್ತಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನವೆಂಬರ್ 14 (ಬುಧವಾರ) ಕೊನೆಯ ದಿನಾಂಕವಾಗಿರುತ್ತದೆ ಎಂದು ತಿಳಿಸಿದರು.

ಮತದಾನದ ಅವಶ್ಯಕತೆ ಇದ್ದರೆ ನವೆಂಬರ್ 23 ರಂದು (ಶನಿವಾರ) ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ನಡೆಸಲಾಗುವುದು. ಇನ್ನು ಮರು ಮತದಾನ ಇದ್ದಲ್ಲಿ ನವೆಂಬರ್ 25 ರಂದು (ಭಾನುವಾರ) ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ನಡೆಸಲಾಗುತ್ತಿದೆ. ಮತಗಳ ಎಣಿಕೆಯನ್ನು ನವೆಂಬರ್ 26 ರಂದು (ಸೋಮವಾರ) ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲ್ಲೂಕಾ ಕೇಂದ್ರ ಸ್ಥಾನದಲ್ಲಿ ನಡೆಸಿ ಒಟ್ಟಾರೆಯಾಗಿ ಚುನಾವಣೆ ಪ್ರಕ್ರಿಯೆ ನವೆಂಬರ್ 26ಕ್ಕೆ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News