ಕಲಬುರಗಿ | ವಿವಿಧ ಬೇಡಿಕೆಗಳ ಈಡೇರಿಸುವಂತೆ ಅಂಗವಿಕಲರ ನೌಕರರ ಸಂಘ ಆಗ್ರಹ

Update: 2024-11-05 16:02 GMT

ಕಲಬುರಗಿ : ಕರ್ನಾಟಕ ರಾಜ್ಯ ಸರಕಾರಿ ಅಂಗವಿಕಲರ ನೌಕರರ ಸಂಘದ ವಿವಿಧ ಬೇಡಿಕೆಗಳು ಈಡೇರಿಸುವಂತೆ ಆಗ್ರಹಿಸಿ ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷ ದಾಯಗೋಡೆ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಮುಂಬಡ್ತಿಯಲ್ಲಿ ಮೀಸಲಾತಿ, 7ನೇ ವೇತನ ಆಯೋಗದ ಶಿಫಾರಸಿನಂತೆ ಅಂಗವಿಕಲರಿಗೆ ಶೇ.6ರಷ್ಟು ಪ್ರಯಾಣ ಭತ್ಯೆ ಸೇರಿದಂತೆ ಇತರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ.ಗಿರಿಮಲ್ಲ,ಪ್ರಧಾನ ಕಾರ್ಯದರ್ಶಿ ಡಾ.ಚಂದ್ರಕಾಂತ ಚಂದಾಪುರ, ಎಸ್.ಪಿ.ಸುಳ್ಳದ ಶಾಶ್ವತ ಆಮಂತ್ರಕರು, ಜಂಟಿ ಕಾರ್ಯದರ್ಶಿ ಲಾಲ್ ಅಹಮ್ಮದ್, ರಾಜೇಂದ್ರ, ಯಲ್ಲಾಲಿಂಗ, ಸಂತೋಷ ಮುಳಜೆ, ಮಹಾಂತೇಶ ಪಾಟೀಲ, ಅಂಕುಶ, ಅಲ್ಲಾದ್ದೀನ್, ರಾಜೇಂದ್ರ, ಶಿವರಾಯ,ಇಬ್ರಾಹಿಂ, ಜಗನ್ನಾಥ ಮೊರೆ, ಗುರುರಾಜ, ವಿಜಯಕುಮಾರ, ಭಾಗ್ಯವಂತ ಜೋಗುರ, ಶಿವಪುತ್ರ ತಳವಾರ,ಸಂಜೀವಕುಮಾರ ಸೇಡಂ, ಮಹಾಂತೇಶ ಬಿಮನಳ್ಳಿಕರ, ಅಕ್ಬರ್,ನಾಗೇಂದ್ರ, ರವಿಕಾಂತ ಬಿರಾದಾರ, ಮಲ್ಲಿಕಾರ್ಜುನ ಕೊರಳ್ಳಿ, ವಿವೇಕಾನಂದ, ಮಲ್ಲಿಕಾರ್ಜುನ ಶೆಟ್ಟಿ, ಚಂದ್ರಕಾಂತ ನಾಟೆಕಾರ ಸಿದ್ರಾಮಪ್ಪ ದೋತ್ರೆ, ರಾಜಕುಮಾರ ಸುಂಬಡ,ರುದ್ರಯ್ಯ ಗಂಗನಳ್ಳಿ, ಬೀರಪ್ಪ ಜೋಗರ , ಬಾಬುರಾವ್ ವಾಲ್ಮೀಕಿ, ಬಸಮ್ಮ ಮಾಲಿ ಪಾಟೀಲ್, ಯಶೋಧಾ ರಾಠೋಡ ಸೇರಿದಂತೆ ಇತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News