ಕಲಬುರಗಿ | ಜಿಲ್ಲಾ ಕಸಾಪದಿಂದ ಕಿರುತೆರೆ ನಟಿ ರಾಘವಿಗೆ ಸನ್ಮಾನ

Update: 2024-11-05 12:50 GMT

ಕಲಬುರಗಿ : ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ ಎಂದು ಕಿರುತೆರೆ ನಟಿ ರಾಘವಿ ಅಭಿಮತ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಕಲಬುರಗಿಯ ಮಗಳಾಗಿದ್ದೇನೆ. ತವರಿನಲ್ಲಿ ಸನ್ಮಾನ ಸಿಕ್ಕಿದ್ದು ನನಗೆ ಅತ್ಯಂತ ಸಂತಸವಾಗಿದೆ. ಇದೊಂದು ಎಂದೂ ಮರೆಯದ ಕ್ಷಣ ಎಂದು ಹೇಳಿದರು.

ಉತ್ತರ ಕರ್ನಾಟಕದ ಕಲಾವಿದರು ಚಿತ್ರ ರಂಗದಲ್ಲಿ ಅವಕಾಶ ಪಡೆಯಬೇಕಾದರೆ ಹೋರಾಟ ಮಾಡಬೇಕಾಗುತ್ತಿದೆ. ಈ ಭಾಗದಲ್ಲಿ ಅನೇಕ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲ್ಯಾಣ ನಾಡಿನಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ. ಹಾಗಾಗಿ ನಮ್ಮ ಭಾಗದ ಕಲಾವಿದರನ್ನು ಬೆಳೆಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಕರ್ತವ್ಯವಾಗಿದೆ. ಈ ನೆಲ ಪ್ರತಿಭಾವಂತರ ನಾಡಾಗಿದೆ. ಸಾಧಕರನ್ನು ಸತ್ಕರಿಸುವುದರ ಜತೆಗೆ ಸಾಧಕರನ್ನಾಗಿ ನಿರ್ಮಿಸಲು ಪ್ರೇರಣೆ ಕೊಡುವ ಕಾರ್ಯವೂ ಸಹ ಪರಿಷತ್ತು ಮಾಡುತ್ತಿದೆ ಎಂದರು.

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ತತ್ವಪದ ಗಾಯಕ ಅಮೃತಪ್ಪ ಅಣೂರ ಕವಿಗಳು, ನ್ಯಾಯವಾದಿ ಶಿವಲಿಂಗಪ್ಪ ಅಷ್ಟಗಿ, ವಿನೋದಕುಮಾರ ಜೇನವೇರಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜೇಂದ್ರ ಮಾಡಬೂಳ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಶಿವಾನಂದ ಸುರವಾಸಿ, ರಾಜು ಕೋಷ್ಟಿ, ಗಣೇಶ ಚಿನ್ನಾಕಾರ, ಪ್ರಭವ ಪಟ್ಟಣಕರ್, ಎಂ ಎನ್ ಸುಗಂಧಿ, ಮಂಜುನಾಥ ಕಂಬಾಳಿಮಠ, ಚಂದ್ರಶೇಖರ ಮ್ಯಾಳಗಿ, ಶ್ರೀನಿವಾಸ ಬಲ್ಪೂರ್, ಗೀತಾಂಜಲಿ ಮೈನಾಳೆ, ರಾಜಕುಮಾರ ಭಂಡಾರಿ, ಚಂದ್ರಕಾಂತ ಸೂರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News