ಕಲಬುರಗಿ: ಯುವಕನಿಗೆ ಚಾಕು ಇರಿತ; ಪ್ರಕರಣ ದಾಖಲು

Update: 2024-11-05 05:51 GMT

ಕಲಬುರಗಿ: ಯುವತಿಯೊಬ್ಬಳನ್ನು ಚುಡಾಯಿಸುತ್ತಿದ್ದ ಯುವಕನೊಬ್ಬ ಬುದ್ಧಿವಾದ ಹೇಳಿದ ಆಕೆಯ ಅಣ್ಣನಿಗೆ ಚೂರಿ ಇರಿದ ಘಟನೆ ಇಲ್ಲಿನ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಣೆಗಾಂವ ಬಸವನ ತಾಂಡಾದಲ್ಲಿ ನಡೆದಿದೆ.

 ಆರೋಪಿಯನ್ನು ಪರಶುರಾಮ್ ನಾರಾಯಣ ರಾಠೋಡ್ ಎಂದು ಗುರುತಿಸಲಾಗಿದೆ. ಅಮರನಾಥ ಚಿನ್ನಾ ರಾಠೋಡ್ ಎಂಬವವರು ಇರಿತಕ್ಕೊಳಗಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಸಹೋದರಿಯನ್ನು ಆಗಾಗ ಚುಡಾಯಿಸುತ್ತಿದ್ದ ಪರಶುರಾಮನಿಗೆ ಸಹೋದರರಾದ ಅಮರನಾಥ ರಾಠೋಡ್ ಮತ್ತು ಶಿವಾಜಿ ರಾಠೋಡ್ ಎಂಬವರು  "ನಮ್ಮ ತಂಗಿಯ ತಂಟೆಗೆ ಬರಬೇಡ"ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಕುಪಿತನಾದ ಆರೋಪಿ ಪರಶುರಾಮನು ರಾಘವೇಂದ್ರ, ಪ್ರವೀಣ್, ಪ್ರತಾಪ್, ಶೇಖರ್ ಮತ್ತು ರಾಕೇಶ್ ಜೊತೆಗೂಡಿ ಅಮರನಾಥ ಅವರೊಂದಿಗೆ ಜಗಳವಾಡಿ, ಅವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಲ್ಲದೆ, ಶಿವಾಜಿ ಚಿನ್ನಾ‌ ರಾಠೋಡ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News