ಕಲಬುರಗಿ | ವ್ಯಕ್ತಿಯ ಹತ್ಯೆ ಪ್ರಕರಣ: ಎರಡು ದಿನ ಬಳಿಕ ರುಂಡ ಪತ್ತೆ!
Update: 2024-11-06 05:57 GMT
ಕಲಬುರಗಿ: ಇಲ್ಲಿನ ಬಬಲಾದ ಗ್ರಾಮದ ಬಳಿ ವ್ಯಕ್ತಿಯನ್ನು ಕಡಿದು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವ್ಯಕ್ತಿಯ ರುಂಡ ಪತ್ತೆಯಾಗಿದೆ.
ನವೆಂಬರ್ 4 ರಂದು ಬಬಲಾದ ಗ್ರಾಮದ ಸಮೀಪ ರುಂಡ ಇಲ್ಲದ ಮುಂಡ ಪತ್ತೆಯಾಗಿತ್ತು. ಇದೀಗ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಎರಡು ದಿನಗಳ ಬಳಿಕ ಹತ್ಯೆಯಾದ ವ್ಯಕ್ತಿಯ ರುಂಡ ಪತ್ತೆಯಾಗಿರುವುದು ವರದಿಯಾಗಿದೆ.
ಬಬಲಾದ ಗ್ರಾಮದಿಂದ 1 ಕಿಮೀ ಅಂತರದಲ್ಲಿ ರುಂಡ ಪತ್ತೆಯಾಗಿದೆ. ಇದೀಗ ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆಗಾಗಿ ಪೊಲೀಸರ ತನಿಖೆ ನಡೆಸುತ್ತಿದ್ದಾರೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೇಸಿನ ಕುರಿತಂತೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.