ಗ್ರಾಮೀಣ ಭಾಗದ ರಂಗಕರ್ಮಿಗಳ ಪ್ರೋತ್ಸಾಹಿಸಿ; ಪರ್ವತ ಲಿಂಗೇಶ್ವರ ಮಹಾರಾಜ್

Update: 2025-03-14 22:52 IST
ಗ್ರಾಮೀಣ ಭಾಗದ ರಂಗಕರ್ಮಿಗಳ ಪ್ರೋತ್ಸಾಹಿಸಿ; ಪರ್ವತ ಲಿಂಗೇಶ್ವರ ಮಹಾರಾಜ್
  • whatsapp icon

ಕಲಬುರಗಿ: ಕಾಳಗಿ ತಾಲೂಕನ ರೇವಗಿ ರಟಕಲ್ ಶ್ರೀರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ರೇಣುಕಾಚಾರ್ಯ ಜಯಂತಿ ರಥೋತ್ಸವದ ಅಂಗವಾಗಿ ಮೂರು ದಿನಗಳ ವರೆಗೆ ʼಪಾಪದ ಕಣ್ಣು ಪುಣ್ಯದ ಹೆಣ್ಣು. ಅರ್ಥಾಥ. ನಿನ್ನ ಗಂಡ ನಾನಲ್ಲʼ ಎಂಬ ನಾಟಕ ಅದ್ದೂರಿಯಾಗಿ ಸಮಾರೋಪಗೊಂಡಿತ್ತು.

ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ತೆರೆ ನೀಡಿದ ಪರ್ವತ ಲಿಂಗೇಶ್ವರ ಮಹಾರಾಜ್ ಸೋನಾಲ್ಗಿರಿ ಮಾತನಾಡಿ, ನಾಟಕಗಳು, ಜನಪದ, ಗೀಗೀಪದ, ಡಪಿನಾಟ ಇವುಗಳ ಉಳಿಸಿ ಬೆಳೆಸಬೇಕು. ಮೊಬೈಲ್ ಯುಗದಲ್ಲಿ ರಾತ್ರಿ ಇಡೀ ನಾಟಕ ನೋಡಿ ಪ್ರೋತ್ಸಾಹಿಸುವ ಪರಂಪರೆಯನ್ನು ಮರುಜೀವ ನೀಡುವುದು ಮುಖ್ಯವಾಗಿದೆ ಎಂದರು.

ನಾಟಕ ಪ್ರದರ್ಶನದ ನಂತರ ಮಾತನಾಡಿದ ನಾಟಕಗಳೂ ಸಮಾಜದ ತಪ್ಪುಗಳನ್ನುತಿದ್ದುವ ವೇದಿಕೆಗಳಾಗಿವೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಕರೆ ನೀಡಿದರು.

ಗ್ರಾಮೀಣ ಭಾಗದಲ್ಲಿ ನಟಿಸಿರತಕ್ಕಂತ ಪ್ರತಿಭೆಗಳನ್ನು ಗುರುತಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಗಳಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿರುವ ಕಾಳಗಿ ತಾಲ್ಲೂಕಿನಲ್ಲಿ ಇಂದಿಗೂ ಜೀವಂತವಾಗಿವೆ. ಎಲೆ ಮರಿ ಕಾಯಂತಿದ್ದ ಪ್ರತಿಭೆಗಳನ್ನು ಗುರುತಿಸಿ ಹವ್ಯಾಸಿ ರಂಗಭೂಮಿಗೆ ದುಡಿಯುತ್ತಿರುವ ಶಿವರಾಜ್ ಪಾಟೀಲ್ ಮತ್ತು ವೀರಣ್ಣ ಗಂಗಾಣಿ ರಟಕಲ್ ಅವರ ಶ್ರಮವೆ ಇದಕ್ಕೆ ಸಾಕ್ಷಿ. ನಾಟಕದಂತಹ ಮನೋರಂಜನೆಯಿಂದ ಹತ್ತಾರು ಕುಟುಂಬಗಳು ಬದುಕುತ್ತಿದ್ದಾರೆ ಎಂದು ತಿಳಿಸಿದರು.

ಈ ವೇಳೆ ನಾಟ್ಯ ಸಂಘದ ಅಧ್ಯಕ್ಷರಾದ ಚಂದ್ರಪ್ಪ ಮಾಸ್ಟರ್, ಗೌರವಧ್ಯಕ್ಷರಾದ ಅಜೀಂ ಪಟೇಲ್, ಉಪಾಧ್ಯಕ್ಷರಾದ ವೀರಣ್ಣ ಗಂಗಾಣಿ. ಕಾರ್ಯಧ್ಯಕ್ಷರಾದ ದತ್ತಾತ್ರೇಯ ರಾಯ್ ಗೋಳ, ಮಾಲೀಕರಾದ ಶಿವರಾಜ ಪಾಟೀಲ್, ಕವಿಗಳಾದ ದಿವಾಕರ್ ಜೋಶಿ, ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News